locus ಲೋ(ಲಾ)ಕಸ್‍
ನಾಮವಾಚಕ
(ಬಹುವಚನ loci ಉಚ್ಚಾರಣೆ ಲೋಸೈ, ಲೋಕೈ, ಲೋಕೀ).
  1. (ಮುಖ್ಯವಾಗಿ ಯಾವುದೇ ಪಠ್ಯ, ಪ್ರಕರಣಗ್ರಂಥ, ಮೊದಲಾದವುಗಳಲ್ಲಿನ ಒಂದು) ಜಾಗ; ಸ್ಥಾನ; ಕಡೆ; ವಿಭಾಗ.
  2. (ಗಣಿತ) ಬಿಂದುಪಥ; ಗಣಿತೀಯವಾಗಿ ನಿಗದಿ ಪಡಿಸಿದ ಉಪಾಧಿಗೆ ಅನುಗುಣವಾಗಿ ಚಲಿಸುವ ಬಿಂದು ಮೊದಲಾದವುಗಳು ರೂಪಿಸುವ ಆಕೃತಿ ಯಾ ವಕ್ರ.
  3. (ಜೀವವಿಜ್ಞಾನ) ಸ್ಥಾನ, ಮುಖ್ಯವಾಗಿ ಕ್ರೋಮೊಸೋಮ್‍ನಲ್ಲಿ ಜೀನ್‍ ಯಾ ವಿಕೃತಿಯ ಸ್ಥಾನ.
  4. (ಯಾವುದೇ ವಸ್ತುವಿನ) ನಿಷ್ಕೃಷ್ಟ – ಸ್ಥಾನ, ನೆಲೆ, ಕ್ಷೇತ್ರ, ಸ್ಥಳ, ತಾವು, ತಾಣ, ಪ್ರದೇಶ.