location ಲೋಕೇಷನ್‍
ನಾಮವಾಚಕ
  1. ನೆಲೆ; ತಾವು; ನಿವಾಸ; ವಾಸಸ್ಥಾನ; ಠಿಕಾಣಿ; ವ್ಯಕ್ತಿ ಯಾ ವಸ್ತು ನೆಲೆಸಿರುವ ಯಾ ವಾಸಿಸುತ್ತಿರುವ ಸ್ಥಳ: this town is a good location for a young doctor ತರುಣ ವೈದ್ಯನಿಗೆ ಈ ಪಟ್ಟಣ ಒಳ್ಳೆಯ (ಅನುಕೂಲವಾದ) ನೆಲೆ.
  2. ಸ್ಥಾಪನೆ; ಸ್ಥಾಪಿಸುವುದು: the location of industries in rural areas ಗ್ರಾಮೀಣ ಪ್ರದೇಶಗಳಲ್ಲಿ ಯಂತ್ರೋದ್ಯಮಗಳ ಸ್ಥಾಪನೆ.
  3. ಸ್ಥಾಪಿತವಾಗಿರುವುದು.
  4. (ಚಲನಚಿತ್ರ) ಹೊರಾಂಗಣ; ಯಾವುದೇ ಚಲನಚಿತ್ರದ ಯಾ ಅದರ ಭಾಗದ ಚಿತ್ರೀಕರಣಕ್ಕೆ ಯೋಗ್ಯವಾದ, ಸ್ಟೂಡಿಯೋ ಹೊರಗಿನ ಸ್ಥಳ: on location ಹೊರಾಂಗಣದಲ್ಲಿ. filmed entirely on location ಹೊರಾಂಗಣದಲ್ಲೇ ಪೂರ್ತಿಯಾಗಿ ಚಿತ್ರತೆಗೆದ.
  5. (ದಕ್ಷಿಣ ಆಹ್ರಿಕ) ಕರಿಯರ ಪ್ರದೇಶ; ಸಾಮಾನ್ಯವಾಗಿ ಪಟ್ಟಣದ ಯಾ ನಗರದ ಹೊರವಲಯಗಳಲ್ಲಿ, ಕರಿಯರು ವಾಸಿಸಲು ನಿರ್ಬಂಧಿಸಲಾದ ಪ್ರದೇಶ, ವಿಭಾಗ.
  6. (ನಿರ್ದಿಷ್ಟ) ಸ್ಥಳ; (ಗೊತ್ತಾದ) ಜಾಗ; ಸ್ಥಾನ; ಸನ್ನಿವೇಶ; ಆಕ್ರಮಿಸಿರುವ, ಆಶ್ರಯಿಸಿರುವ, ನಿಂತಿರುವ – ಜಾಗ: a house in a fine location ಸೊಗಸಾದ ಸನ್ನಿವೇಶದಲ್ಲಿರುವ ಮನೆ.