locate ಲೋಕೇಟ್‍
ಸಕರ್ಮಕ ಕ್ರಿಯಾಪದ
  1. ಸರಿಯಾದ ನೆಲೆಯನ್ನು – ಕಂಡುಹಿಡಿ, ಗೊತ್ತು ಮಾಡು, ಗುರುತಿಸು, ಪತ್ತೆಹಚ್ಚು: locate the enemy’s camp ಶತ್ರುವಿನ ಶಿಬಿರದ ನೆಲೆಯನ್ನು ಪತ್ತೆಹಚ್ಚು.
  2. (ಒಂದು ನಿರ್ದಿಷ್ಟ ಸ್ಥಳದಲ್ಲಿ ಯಾ ಅದರ ಸರಿಯಾದ ಸ್ಥಳದಲ್ಲಿ) ಸ್ಥಾಪಿಸು; ನೆಲೆಗೊಳಿಸು; ಪ್ರತಿಷ್ಠಾಪಿಸು.
  3. ನೆಲೆಯನ್ನು ನಿರ್ದೇಶಿಸು; ಇರುವ ಜಾಗವನ್ನು ಹೇಳು; ಸ್ಥಳ ತಿಳಿಸು.
  4. (ಕರ್ಮಣಿಪ್ರಯೋಗದಲ್ಲಿ) ಸ್ಥಾಪಿತವಾಗಿರು; ನೆಲೆಗೊಂಡಿರು.
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಒಂದು ಸ್ಥಳದಲ್ಲಿ) ನಿವಾಸವನ್ನು ಯಾ ವ್ಯಾಪಾರವನ್ನು – ಸ್ಥಾಪಿಸು, ಹೂಡು.