localize ಲೋಕಲೈಸ್‍
ಸಕರ್ಮಕ ಕ್ರಿಯಾಪದ
  1. ಸ್ಥಳೀಕರಿಸು; ನಿರ್ದಿಷ್ಟ ಸ್ಥಳಕ್ಕೆ ಯಾ ಪ್ರದೇಶಕ್ಕೆ – ಕಟ್ಟುಬೀಳಿಸು. ಪರಿಮಿತಗೊಳಿಸು, ಸೀಮಿತಗೊಳಿಸು: little hope of localizing the disease ರೋಗವನ್ನು ಆ ಪ್ರದೇಶಕ್ಕೆ ಸೀಮಿತಗೊಳಿಸುವ ಭರವಸೆ ಬಹಳ ಕಡಿಮೆ.
  2. ಸ್ಥಳೀಕರಿಸು; ನಿರ್ದಿಷ್ಟ ಸ್ಥಳದ, ಪ್ರದೇಶದ ವಿಶಿಷ್ಟ ಗುಣಗಳನ್ನು ಯಾ ಲಕ್ಷಣಗಳನ್ನು ಹೊರಿಸು, ಆರೋಪಿಸು; ಪ್ರಾದೇಶಿಕತೆ – ತರು, ಉಂಟುಮಾಡು.
  3. ಸ್ಥಳೀಯಗೊಳಿಸು; ವಿಕೇಂದ್ರೀಕರಿಸಿ ಸ್ಥಳೀಯ ಆಡಳಿತಕ್ಕೊಳಪಡಿಸು.
  4. ಗಮನವನ್ನೆಲ್ಲ (ವ್ಯಕ್ತಿಯ, ವಸ್ತುವಿನ ಮೇಲೆ) ಕೇಂದ್ರೀಕರಿಸು.
  5. (ವಿರಳ ಪ್ರಯೋಗ) = locate.