loading ಲೋಡಿಂಗ್‍
ನಾಮವಾಚಕ
  1. (ವಿದ್ಯುದ್ವಿಜ್ಞಾನ) ಹೇರಿಕೆ; ಹೊರೆ; ಒಂದು ಸಾಧನವು ಗರಿಷ್ಠ ವಿದ್ಯುತ್ತನ್ನು ಸ್ವೀಕರಿಸುವ ಪ್ರಮಾಣ.
  2. (ವಿಮೆ) ಹೊರೆ; ವಿಶೇಷ ಕಾರಣಗಳಿಂದ ರೂಢಿಯ ಕಂತಿನ ಜೊತೆಗೆ ತೆಗೆದುಕೊಳ್ಳುವ ಹೆಚ್ಚಿನ ಹಣ.
  3. (ಆಸ್ಟ್ರೇಲಿಯ) ವಿಶೇಷ ಬಡ್ತಿ; ಕೌಶಲಬಡ್ತಿ; ವಿಶೇಷ ಕೌಶಲ ಮೊದಲಾದವುಗಳಿಗಾಗಿ ಮೂಲ ವೇತನಕ್ಕೆ ಸೇರಿಸುವ ಒಂದು ವೇತನಬಡ್ತಿ.
  4. ತುಂಬಿಕೆ; ಭಾರ ಹೇರುವುದು; ಹೊರೆ ತುಂಬುವುದು; ಹೇರು ಏರಿಸುವುದು.
  5. ಹೇರು; ಹೊರೆ; ಲೋಡು; ಹೇರಿನ ವಸ್ತು.
  6. (ವಾಯುಯಾನ) ಹೊರೆ; ವಿಮಾನದ ಒಟ್ಟು ತೂಕಕ್ಕೂ ಅದರ ಎಂಜಿನ್ನಿನ ಸಾಮರ್ಥ್ಯಕ್ಕೂ (ಕೆಲವು ವೇಳೆ ರೆಕ್ಕೆಯ ವೈಶಾಲ್ಯ ಯಾ ವಿಸ್ತೀರ್ಣಕ್ಕೆ) ಇರುವ ದಾಮಾಷಾ.