lively ಲೈವ್‍ಲಿ
ಗುಣವಾಚಕ
  1. ಯಥಾವತ್ತಾದ; ಜೀವಂತ; ಸಜೀವ; ಜೀವವಿರುವಂತೆ ತೋರುವ: a lively description ಜೀವಂತ ವರ್ಣನೆ; ಸಜೀವ ಚಿತ್ರಣ; ಕಣ್ಣಿಗೆ ಕಟ್ಟುವ ವರ್ಣನೆ. give a lively idea of (ಒಂದು ವಿಷಯದ ಬಗ್ಗೆ) ಯಥಾವತ್ತಾದ ಭಾವನೆ ಮೂಡಿಸು.
  2. ಚುರುಕಾದ; ಚಟುವಟಿಕೆಯುಳ್ಳ: a lively pace ಚುರುಕಾದ ವೇಗ.
  3. ಸ್ವಾರಸ್ಯವಾದ; ರಸಮಯವಾದ: a lively discussion ಸ್ವಾರಸ್ಯವಾದ ಚರ್ಚೆ.
  4. ಉಲ್ಲಾಸಕರ; ಗೆಲುವಿನ; ಉತ್ಸಾಹ – ಭರಿತ, ತುಂಬಿದ.
  5. (ಹಾಸ್ಯ ಪ್ರಯೋಗ)
    1. ಉದ್ರೇಕಕಾರಿ; ಕೆರಳಿಸುವಂಥ.
    2. ಕಷ್ಟಕರ; ಅಪಾಯಕಾರಿ.
    3. ಸಾಕು ಬೇಕು ಮಾಡುವ; ಹೆಣಗಾಡಿಸುವಂಥ: the police had a lively time ಪೊಲೀಸಿನವರು ಬಹಳ ಹೆಣಗಾಡಬೇಕಾಯಿತು. the press is making things lively for him ಅವನನ್ನು ವೃತ್ತಪತ್ರಿಕೆಯವರು ಹೆಣಗಾಡಿಸುತ್ತಿದ್ದಾರೆ.
  6. (ಬಣ್ಣದ ವಿಷಯದಲ್ಲಿ) ಹೊಳಪಿನ; ಉಜ್ಜ್ವಲ; ಹೊಳೆಯುವ.
  7. ಜೀವ ತುಂಬಿದ; ಉತ್ಸಾಹಭರಿತ; ವೀರ್ಯವತ್ತಾದ; ಶಕ್ತಿಯಿಂದ ಕೂಡಿದ.
  8. (ದೋಣಿ ಮೊದಲಾದವುಗಳ ವಿಷಯದಲ್ಲಿ) ಅಲೆಗಳ ಮೇಲೆ ಹಗುರವಾಗಿ ಏಳುವ.
ಪದಗುಚ್ಛ

look lively ಚುರುಕಾಗಿ ಓಡಾಡು; ಚಟುವಟಿಕೆ ತೋರು.