See also 2live
1live ಲಿವ್‍
ಸಕರ್ಮಕ ಕ್ರಿಯಾಪದ
  1. ಜೀವನ ನಡೆಸು; ಜೀವಿಸು; ಬಾಳು; ಬದುಕು; ಅನುಭವಿಸು: live a virtuous life ಸಜ್ಜೀವನ ನಡೆಸು; ಒಳ್ಳೆಯ ಬಾಳು ಬಾಳು. lived what he preached ಉಪದೇಶಿಸಿದ್ದನ್ನು ಅನುಭವಿಸಿದ; ಉಪದೇಶಿಸಿದಂತೆ ಬದುಕಿದ.
  2. ತನ್ನ ಬದುಕಿನಲ್ಲಿ – ತೋರಿಸು, ಅಭಿವ್ಯಕ್ತಿಸು: live a lie ಸುಳ್ಳು (ಬದುಕು) ಬದುಕು; ಸುಳ್ಳು ಜೀವನ ನಡೆಸು.
ಅಕರ್ಮಕ ಕ್ರಿಯಾಪದ
  1. ಜೀವದಿಂದಿರು; ಜೀವಿಸಿರು; ಜೀವಿಸು; ಬದುಕು; ಬದುಕಿರು; ಬಾಳು; ಪ್ರಾಣವಿರು; ಪ್ರಾಣದಿಂದಿರು; ಪ್ರಾಣಿಯಾಗಿ ಯಾ ಸಸ್ಯವಾಗಿ ಜೀವಹೊಂದಿರು.
  2. (ತಿಂದು, ಆಶ್ರಯಿಸಿ ಯಾ ಆಧಾರದ ಮೇಲೆ) ಜೀವಿಸು; ಬದುಕು; ಜೀವಯಾಪನೆ ಮಾಡು; ಪ್ರಾಣಧಾರಣೆ ಮಾಡು: lives on fruit ಹಣ್ಣಿನ ಮೇಲೆ, ಹಣ್ಣು ತಿಂದು – ಜೀವಿಸುತ್ತಾನೆ. lives upon his wife’s earnings ಹೆಂಡತಿಯ ಸಂಪಾದನೆಯ ಮೇಲೆ ಬದುಕುತ್ತಿದ್ದಾನೆ.
  3. ಬದುಕಿಗಾಗಿ ಆಶ್ರಯಿಸು; ಉಳಿವಿಗಾಗಿ ಅವಲಂಬಿಸಿರು: lives on income from investments (ಬದುಕಿಗೆ) ಬಂಡವಾಳದ ಆದಾಯವನ್ನು ಅವಲಂಬಿಸಿದ್ದಾನೆ. lives off the family property ಮನೆತನದ ಆಸ್ತಿಯ ಮೇಲೆ ಬದುಕಿದ್ದಾನೆ, ಜೀವಿಸಿದ್ದಾನೆ.
  4. (ರೂಪಕವಾಗಿ) (ತನ್ನ ಸ್ಥಾನ ಮತ್ತು ಗೌರವಗಳನ್ನು ಆಶ್ರಯಿಸಿ, ಅವುಗಳ ಆಧಾರದ ಮೇಲೆ) ಬದುಕು; ಜೀವಿಸು: lives on his reputation ಅವನ ಹೆಸರಿನ ಪ್ರಸಿದ್ಧಿಯ (ಬಲದ) ಮೇಲೆ ಬದುಕುತ್ತಾನೆ, ಜೀವನ ಸಾಗಿಸುತ್ತಾನೆ.
  5. (ಬುದ್ಧಿ ಚಾತುರ್ಯ, ದುಡಿಮೆ, ಮೊದಲಾದವುಗಳ ಮೂಲಕ) ಜೀವನೋಪಾಯ ಸಂಪಾದಿಸು; ಜೀವಿಕೆ ಗಳಿಸು; ತನ್ನ ಬುದ್ಧಿವಂತಿಕೆಯಿಂದ (ಕೆಲವು ಸಲ ಮೋಸ ಮಾರ್ಗಗಳಿಂದ) ಜೀವಿಸು.
  6. ನಡೆದುಕೊ; ನಡವಳಿಕೆಯಲ್ಲಿ – ಅನುಸರಿಸು, ಪಾಲಿಸು; ಒಂದು ವಿಶೇಷ ರೀತಿಯಲ್ಲಿ – ಬದುಕು, ಬಾಳು, ಜೀವಿಸು: live quietly ಶಾಂತವಾಗಿ ಬದುಕು. live honestly ಪ್ರಾಮಾಣಿಕತೆಯಿಂದ ಬಾಳು. live viciously ಕೆಟ್ಟಜೀವನ ನಡೆಸು. live like a saint ಸಂತನಂತೆ ಬಾಳು.
  7. ತನ್ನ ಹವ್ಯಾಸಗಳು, ಖರ್ಚು, ಆಹಾರ, ಮೊದಲಾದವುಗಳನ್ನು – ವ್ಯವಸ್ಥೆ ಮಾಡಿಕೊ, ಏರ್ಪಾಟು ಮಾಡಿ ಜೀವಿಸು: live modestly ಆಡಂಬರ ರಹಿತವಾಗಿ ಜೀವಿಸು.
  8. ವಾಸಿಸು; ವಾಸ ಮಾಡು; ತನ್ನ ಕಾಯಂ ವಾಸಸ್ಥಳ ಮಾಡಿಕೊಂಡಿರು ಯಾ ಹೊಂದಿರು: live in Mysore ಮೈಸೂರಿನಲ್ಲಿ ವಾಸಮಾಡು. live abroad ವಿದೇಶದಲ್ಲಿ ವಾಸ ಮಾಡು.
  9. (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ಬದುಕಿರು; ಉಳಿದಿರು; ಜೀವಂತವಾಗಿರು; ಜೀವ ಹಿಡಿದುಕೊಂಡಿರು; ಉಸಿರಿಟ್ಟುಕೊಂಡಿರು; ಪ್ರಾಣ ಉಳಿಸಿಕೊಂಡಿರು: his memory lives ಅವನ ನೆನಪು ಉಳಿದಿದೆ, ಜೀವಂತವಾಗಿದೆ. the patient cannot live ರೋಗಿ ಉಳಿಯಲಾರ. lived to see his children’s children ತನ್ನ ಮೊಮ್ಮಕ್ಕಳನ್ನು ನೋಡುವವರೆಗೂ ಬದುಕಿದ್ದ.
  10. (ಹಡಗು ಮೊದಲಾದವುಗಳ ವಿಷಯದಲ್ಲಿ) ನಾಶವಾಗದೆ ಉಳಿ; ವಿನಾಶದಿಂದ ತಪ್ಪಿಸಿಕೊಂಡಿರು: nothing could live afloat ಯಾವುದೂ ವಿನಾಶದಿಂದ ತಪ್ಪಿಸಿಕೊಂಡು ಉಳಿಯುವಂತಿರಲಿಲ್ಲ.
  11. ಬದುಕನ್ನು ಪೂರ್ಣವಾಗಿ ಯಾ ತೀವ್ರವಾಗಿ ಸವಿ; ಜೀವನದ ಸುಖ ಸಂತೋಷಗಳನ್ನು ತೀವ್ರವಾಗಿ ಯಾ ಸಂಪೂರ್ಣವಾಗಿ ಅನುಭವಿಸು; ಪೂರ್ತಿ ಸುಖ ಪಡು; ಖುಷಿಯಾಗಿ ಬಾಳು: at forty she was just beginning to live ಅವಳು ತನ್ನ ನಲವತ್ತನೆಯ ವರ್ಷದಲ್ಲಿ ಜೀವನದ ಸುಖ ಸಂತೋಷಗಳನ್ನು ಅನುಭವಿಸಲು ಪ್ರಾರಂಭಿಸಿದ್ದಳು.
ಪದಗುಚ್ಛ
  1. live a lie ಸುಳ್ಳು ಜೀವನ ನಡೆಸು; ಸುಳ್ಳು ಬಾಳು ಬದುಕು; ಸುಳ್ಳನ್ನು ನಿಜವೆಂದು ಮಾಡು: she lived a lie for 20 years pretending to be his wife ಅವನ ಹೆಂಡತಿ ಎಂದು ನಟಿಸುತ್ತಾ 20 ವರ್ಷ ಅವಳು ಸುಳ್ಳು ಜೀವನ ನಡೆಸಿದಳು.
  2. live and learn (ಹೊಸ ಯಾ ಅನಿರೀಕ್ಷಿತ ಅನುಭವದ ಬಗ್ಗೆ ಆಶ್ಚರ್ಯಪಟ್ಟು ಮಾತನಾಡುವಾಗ ಬಳಸುವ ಪ್ರಯೋಗ) ಜೀವನದಲ್ಲಿ ಕಲಿಯಬೇಕಾದದ್ದು ಬಹಳ ಇದೆ; ಬದುಕಿನಲ್ಲಿ ಕಲಿಯಬೇಕಾದದ್ದು ಬೇಕಾದಷ್ಟಿದೆ; ಬದುಕಿನಲ್ಲಿ ಉದ್ದಕ್ಕೂ ಹೊಸ ವಿಷಯಗಳನ್ನು ಕಲಿಯುತ್ತಾ ಹೋಗು, ಕಲಿಯುತ್ತಿರು; ಕಲಿಯುತ್ತಾ ಬದುಕು; ಬದುಕಿದ್ದು ಬುದ್ಧಿ ಕಲಿ.
  3. live and let live ನೀನೂ ಬದುಕು, ಇತರರನ್ನು ಬದುಕಲು ಬಿಡು; ನೀನು ಸಹನೆ ತೋರಿಸಿ, ಇತರರೂ ಪ್ರತಿಯಾಗಿ ಸಹನೆ ತೋರುವಂತೆ ಮಾಡು; ನೀನು ಇತರರಿಂದ ನಿರೀಕ್ಷಿಸುವ ಸಹಾನುಭೂತಿ, ಸಹನೆಗಳನ್ನು ಇತರರ ವಿಷಯದಲ್ಲೂ ತೋರು.
  4. live beyond one’s means ಸಂಪಾದಿಸುವುದಕ್ಕಿಂತ ಹೆಚ್ಚು ಖರ್ಚು ಮಾಡು; ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡು.
  5. live by doing (something) ಯಾವುದನ್ನೇ ಮಾಡುತ್ತಾ ಜೀವನೋಪಾಯ ಗಳಿಸು.
  6. live for something (ಯಾವುದೋ ಒಂದು) ಗುರಿಗಾಗಿ, ಧ್ಯೇಯಕ್ಕಾಗಿ ಜೀವಿಸು, ಬದುಕು: lives for his work ತನ್ನ ಕೆಲಸಕ್ಕಾಗಿ ಬದುಕಿದ್ದಾನೆ.
  7. live in
    1. (ಬ್ರಿಟಿಷ್‍ ಪ್ರಯೋಗ) (ಅಂಗಡಿ ಮತ್ತು ಮನೆ ಕೆಲಸಗಾರರು ಮೊದಲಾದವರ ವಿಷಯದಲ್ಲಿ) ಕೆಲಸ ಮಾಡುವ ಕಡೆಯೇ ವಾಸಿಸು; ಒಳಗೆ ವಾಸಿಸು.
    2. (ಕೊಠಡಿ ಮೊದಲಾದವನ್ನು) ವಾಸಕ್ಕಾಗಿ – ಬಳಸು, ಉಪಯೋಗಿಸು: the veranda was more lived in than the sitting room ವಾಸಕ್ಕಾಗಿ ದಿವಾನಖಾನೆಗಿಂತಲೂ ಹೆಚ್ಚಾಗಿ ವೆರಾಂಡವನ್ನೇ ಬಳಸಲಾಗಿತ್ತು.
  8. live in a small way ಸರಳ, ಮಿತಜೀವನ ನಡೆಸು; ಸ್ವಲ್ಪ ವೆಚ್ಚದಲ್ಲಿ, ಆಡಂಬರವಿಲ್ಲದೆ ಜೀವನ ಮಾಡು.
  9. live in hope(s) (of something) (ಯಾವುದರದೋ) ನಿರೀಕ್ಷೆಯಲ್ಲಿ ಬದುಕು: live in hopes of better time to come ಬರುವ ಒಳ್ಳೆಯ ಕಾಲವನ್ನು ನಿರೀಕ್ಷಿಸುತ್ತಾ ಬದುಕಿರು.
  10. live in sin (ಗತಪ್ರಯೋಗ ಯಾ ಹಾಸ್ಯ ಪ್ರಯೋಗ) (ಗಂಡಸಿನ ಯಾ ಹೆಂಗಸಿನ ವಿಷಯದಲ್ಲಿ) (ಮದುವೆಯಾಗದಿದ್ದರೂ) ಗಂಡಹೆಂಡಿರಂತೆ ಬಾಳು; ದಾಂಪತ್ಯ ಜೀವನ ನಡೆಸು.
  11. live in the past ಭೂತಕಾಲದಲ್ಲಿ ಬದುಕು; ಹಿಂದಿನ ಕಾಲದ ಪರಿಸ್ಥಿತಿಗಳು, ಮೌಲ್ಯಗಳು, ಮೊದಲಾದವು ಬದಲಾಯಿಸಿಯೇ ಇಲ್ಲದಂತೆ ಬಾಳು.
  12. live like a lord ವೈಭವದ ಜೀವನ ನಡೆಸು.
  13. live on air
    1. ಗಾಳಿ ಕುಡಿದು ಬದುಕು; ನಿರಾಹಾರಿಯಾಗಿರು.
    2. ನಿರಾಹಾರಿಯಾಗಿರುವಂತೆ – ಕಾಣು, ತೋರು.
  14. live out
    1. (ಕೆಲಸಗಾರರು ಮೊದಲಾದವರ ವಿಷಯದಲ್ಲಿ) ಕೆಲಸದ ಸ್ಥಳದಿಂದ ಬೇರೆ ಕಡೆ ವಾಸಮಾಡು.
    2. (ಅಪಾಯ, ಕಷ್ಟ, ಮೊದಲಾದವುಗಳಿಂದ) ಪಾರಾಗು; ತಪ್ಪಿಸಿಕೊಂಡು ಉಳಿ.
  15. live through ಬದುಕಿರು; ಜೀವ ಉಳಿಸಿಕೊಂಡಿರು; ಯಾವುದೋ ಒಂದು ಆದ ನಂತರವೂ ಬದುಕಿರು.
  16. live to ಬದುಕುಳಿ; ಉಳಿದಿರು; ಬದುಕಿರು: lived to a great age ಬಹಳ ವಯಸ್ಸಿನವರೆಗೂ ಬದುಕಿದ್ದ.
  17. live together (ಮುಖ್ಯವಾಗಿ ವಿವಾಹವಾಗದ ಗಂಡು ಹೆಣ್ಣು) ಒಂದೇ ಮನೆಯಲ್ಲಿದ್ದು ಲೈಂಗಿಕ ಸಂಬಂಧ ಇಟ್ಟುಕೊಂಡಿರು; ಒಟ್ಟಿಗೆ ಇರು, ವಾಸಿಸು; ಸಹಬಾಳ್ವೆ ನಡೆಸು.
  18. long live! ದೀರ್ಘಾಯುವಾಗಲಿ! ಚಿರಾಯುವಾಗಲಿ! (ನಿಷ್ಠೆ ತೋರುವ ಉದ್ಗಾರ): long live the Republic ಗಣರಾಜ್ಯ ಚಿರಾಯುವಾಗಲಿ.
  19. live well
    1. (ಮೃಷ್ಟಾನ್ನ ಭೋಜನ ಮಾಡುತ್ತ) ಸುಖವಾಗಿ ಬಾಳು; ವೈಭೋಗದಿಂದ ಬದುಕು; ಸುಖದಿಂದ ಜೀವಿಸು.
    2. ಅನುಕೂಲ ಸ್ಥಿತಿಯಲ್ಲಿರು; ಸ್ಥಿತಿವಂತ ಬಾಳು ನಡೆಸು.
    3. ಒಳ್ಳೆಯ ಬದುಕನ್ನು ಬದುಕು; ಸಜ್ಜೀವನ ನಡೆಸು.
  20. live with
    1. ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸು.
    2. ಸಹಿಸಿಕೊ; ತಾಳಿಕೊ; ಒಗ್ಗಿಸಿಕೊ; ಹೊಂದಿಕೊ.
  21. live within one’s means ಆದಾಯವಿರುವಷ್ಟರಲ್ಲಿ ಜೀವಿಸು; ಸಂಪಾದಿಸುವುದಕ್ಕಿಂತ ಕಡಿಮೆ ವೆಚ್ಚಮಾಡು.
ನುಡಿಗಟ್ಟು
  1. live a double life ದ್ವಂದ್ವ ಜೀವನ, ಇಬ್ಬಂದಿ ಜೀವನ ನಡೆಸು; ಒಳಗೊಂದು ಹೊರಗೊಂದು ಬದುಕು ನಡೆಸು.
  2. live down (ಹಿಂದಿನ ಕೆಟ್ಟ ಕೆಲಸ, ಕೆಟ್ಟ ಹೆಸರು, ಅವಮಾನ, ಮೊದಲಾದವು ಮರೆಯುವಂತೆ, ಅಳಿಯುವಂತೆ, ತೊಡೆದು ಹೋಗುವಂತೆ) ಬೇರೆ ರೀತಿಯಲ್ಲಿ ಬಾಳು; ಉದಾತ್ತವಾಗಿ, ಉತ್ತಮವಾಗಿ – ಬಾಳು; ಯೋಗ್ಯ ಜೀವನ ನಡೆಸು: after his release from the prison, he vowed to live down his crimes ಸೆರೆಮನೆಯಿಂದ ಬಿಡುಗಡೆ ಪಡೆದ ಮೇಲೆ ಅವನು ತಾನು ಮಾಡಿದ್ದ ಅಪರಾಧಗಳನ್ನು ಅಳಿಸಿ ಹಾಕುವ ರೀತಿ ಯೋಗ್ಯ ಜೀವನ ನಡೆಸಬೇಕೆಂದು ಪ್ರತಿಜ್ಞೆ ಮಾಡಿದ.
  3. live from $^1$hand to mouth.
  4. live it up (ಆಡುಮಾತು) ಖುಷಿಯಿಂದ, ದುಂದುವೆಚ್ಚ ಮಾಡಿ ಬದುಕು, ಮಜಾ ಮಾಡು.
  5. live out of a suitcase ಒಂದು ಕೈಪೆಟ್ಟಿಗೆಯಿಂದಲೇ ಜೀವನ ಸಾಗಿಸು; ತಾತ್ಕಾಲಿಕವಾಗಿ ವಾಸಿಸುವಾಗ ತನ್ನೆಲ್ಲಾ ಸಾಮಾನುಗಳನ್ನೂ ಒಂದು ಸೂಟುಕೇಸಿನಲ್ಲಿ ಇಟ್ಟುಕೊಂಡು ಕಾಲ ಕಳೆದುಬಿಡು.
  6. live to oneself ಒಂಟಿಯಾಗಿರು; ಒಬ್ಬನೇ(ಳೇ) ವಾಸಿಸು; ಏಕಾಂತವಾಗಿರು.
  7. live to one’s promise, reputation ಕೊಟ್ಟ ವಚನಕ್ಕೆ ತಪ್ಪದಂತೆ, ಹೆಸರು ಕೆಡದಂತೆ, ಮೊದಲಾಗಿ – ಬಾಳು, ಬದುಕು, ಜೀವಿಸು.
  8. live up to one’s income ಸಂಪಾದಿಸಿದ್ದನ್ನೆಲ್ಲ ಖರ್ಚುಮಾಡಿ ಜೀವನ ನಡೆಸು; ಜೀವನಕ್ಕಾಗಿ ಆದಾಯವನ್ನೆಲ್ಲಾ ಖರ್ಚುಮಾಡಿ ಬಿಡು.
  9. live up to (one’s principles or faith)
    1. ತಾನು ಹಾಕಿಕೊಂಡ ನಿಯಮದಂತೆ ಬಾಳು, ತನ್ನ ನಂಬಿಕೆಗೆ, ಶ್ರದ್ಧೆಗೆ ಅನುಸಾರವಾಗಿ ಜೀವನ ನಡೆಸು.
    2. ಮಾತು, ವಾಗ್ದಾನ – ನಡೆಸಿಕೊಡು, ನೆರವೇರಿಸು.
See also 1live
2live ಲೈವ್‍
ಗುಣವಾಚಕ
  1. ಸಜೀವ; ಜೀವಂತ; ಸಪ್ರಾಣ; ಬದುಕಿರುವ; ಜೀವಂತವಾಗಿರುವ; ಜೀವದಿಂದಿರುವ; ಪ್ರಾಣವಿರುವ; ಜೀವಿಸಿರುವ: live animals ಜೀವಂತ ಪ್ರಾಣಿಗಳು.
  2. (ಪ್ರಸಾರದ ವಿಷಯದಲ್ಲಿ) ಜೀವಂತ; ನೇರ(ವಾದ); ಪ್ರತ್ಯಕ್ಷ; ಮುದ್ರಿತವಲ್ಲದ; ಘಟನೆಯ ಸಮಕಾಲದಲ್ಲೇ ನೋಡುವ ಯಾ ಕೇಳುವ; ಘಟನೆ ನಡೆಯುತ್ತಿರುವಾಗಲೇ ನೇರವಾಗಿ ಬಿತ್ತರಿಸಿದ.
  3. ಶಕ್ತಿಪೂರ್ಣ; ಸತ್ತ್ವಪೂರ್ಣ; ಪ್ರಾಮುಖ್ಯವುಳ್ಳ.
  4. ರೂಢಿ ತಪ್ಪಿರದ ಯಾ ಹಳೆಯದಾಗಿರದ; ಜೀವಂತವಾಗಿರುವ; ಚಲಾವಣೆಯಲ್ಲಿರುವ; ಪ್ರಸಕ್ತ; ಪ್ರಚಲಿತ: disarmament is still a live issue ನಿರಸ್ತ್ರೀಕರಣ ಈಗಲೂ ಜೀವಂತವಾದ ವಿಷಯ.
  5. ಜೀವಂತ; ವಿವಿಧ ರೂಪಗಳಲ್ಲಿ ಶಕ್ತಿಯನ್ನು ವ್ಯಯಿಸುವ ಯಾ ವ್ಯಯಿಸಬಲ್ಲ:
    1. (ಕಲ್ಲಿದ್ದಲಿನ ವಿಷಯದಲ್ಲಿ) ಜ್ವಲಂತ; ಉರಿಯುತ್ತಿರುವ; ಮುಖ್ಯವಾಗಿ ನಿಗಿ ನಿಗಿ ಬೆಳಗುತ್ತಿರುವ; ಜ್ವಲಿಸುತ್ತಿರುವ: live embers ಜ್ವಲಿಸುವ ಕೆಂಡಗಳು.
    2. (ಸಿಡಿಗುಂಡಿನ ವಿಷಯದಲ್ಲಿ) ಇನ್ನೂ ಸಿಡಿದಿಲ್ಲದ; ಸ್ಫೋಟವಾಗದಿರುವ.
    3. (ದೀಪದ ಕಡ್ಡಿಯ ವಿಷಯದಲ್ಲಿ) ಇನ್ನೂ ಹೊತ್ತಿಸಿಲ್ಲದ.
    4. (ತಂತಿ ಮೊದಲಾದವುಗಳ ವಿಷಯದಲ್ಲಿ) ವಿದ್ಯುತ್ತಿರುವ; ಸವಿದ್ಯುತ್‍; ವಿದ್ಯುತ್ಪೂರ್ಣ; ವಿದ್ಯುತ್ಪ್ರವಾಹಭರಿತ.
  6. (ಶಿಲೆಯ ವಿಷಯದಲ್ಲಿ) ಸ್ಥಾನಿಕ; ಸ್ಥಳೀಯ; ಸ್ವಸ್ಥಾನದಿಂದ ಬೇರ್ಪಡದೆ ಅಲ್ಲಿಯೇ ಭೂಮಿಯ ಭಾಗದಂತೆ ಇರುವ.
  7. (ಯಂತ್ರದ ಚಕ್ರ, ಅಚ್ಚುಗಂಬಿ, ಮೊದಲಾದವುಗಳ ವಿಷಯದಲ್ಲಿ) ಚಲಿಸುತ್ತಿರುವ; ನಡೆಯುತ್ತಿರುವ; ಚಾಲನೆ ಆಗುತ್ತಿರುವ ಯಾ ಮಾಡುತ್ತಿರುವ.
  8. ಜೀವಸೂಚಕ: the live sounds of the forest ಕಾಡಿನ ಜೀವ ಸೂಚಕ ಶಬ್ದಗಳು.