See also 2litter
1litter ಲಿಟರ್‍
ನಾಮವಾಚಕ
  1. ಸೆತ್ತೆ; ಕಸ; ಕಚಡ; ಒಂದು ಸ್ಥಳದಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವ ಯಾ ಹರರುವ ಚೂರುಪಾರು, ಕಸಕಡ್ಡಿ, ತಿನ್ನದೆ ಚೆಲ್ಲಿದ ತಿಂಡಿ, ಕಾಗದಪತ್ರ, ಮೊದಲಾದವುಗಳ ರಾಶಿ.
  2. ತಿಪ್ಪೆ; ಗಲೀಜಾಗಿರುವ, ಕಚಡವಾಗಿರುವ, ಒಪ್ಪಓರಣವಿಲ್ಲದ ಸ್ಥಿತಿ; ಕಾಗದಗಳು ಮೊದಲಾದವು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸ್ಥಿತಿ; ಅಸ್ತವ್ಯಸ್ತ ಸ್ಥಿತಿ.
  3. ಸೂಳು; ಒಂದು ಸೂಳಿಗೆ ಈದ ಮರಿಗಳು.
  4. ಅಂದಳ; ಶಿಬಿಕೆ; ಮೇನಾ; ಪಲ್ಲಕ್ಕಿ; (ಒಳಗೆ ಸುಪ್ಪತ್ತಿಗೆ ಹಾಸಿದ, ಸುತ್ತಲೂ ಪರದೆಗಳಿಂದ ಮುಚ್ಚಿದ) ಮನುಷ್ಯರು, ಪ್ರಾಣಿಗಳು ಹೊತ್ತು ಒಯ್ಯುವ ಒಂದು ವಾಹನ.
  5. ದಂಡಿಗೆ; ಡೋಲಿ; ಮಂಚಿಲು; ರೋಗಿಗಳನ್ನೂ ಗಾಯಗೊಂಡವರನ್ನೂ ಸಾಗಿಸಲು ಬಳಸುವ ಸುಪ್ಪತ್ತಿಗೆಯ ಚೌಕಟ್ಟು.
  6. (ದನದ) ಹುಲ್ಲುಹಾಸು; (ಮುಖ್ಯವಾಗಿ ಪ್ರಾಣಿಗಳ ಹಾಸಿಗೆಯಾದ) ಒಣಹುಲ್ಲು, ಜೊಂಡು, ಮೊದಲಾದವು.
  7. ಕೊಟ್ಟಿಗೆಯ ಹುಲ್ಲು ಮತ್ತು ಸಗಣಿ.
See also 1litter
2litter ಲಿಟರ್‍
ಸಕರ್ಮಕ ಕ್ರಿಯಾಪದ
  1. ಕಸ ಹರಡು; (ಸ್ಥಳವನ್ನು) ಕಸಕಡ್ಡಿ ಚೆಲ್ಲಿ ಒಪ್ಪಓರಣವಿಲ್ಲದಂತೆ ಮಾಡು.
  2. (ಪದಾರ್ಥ ಮೊದಲಾದವನ್ನು ಎಲ್ಲೆಂದರಲ್ಲಿ, ಚಲ್ಲಾಪಿಲ್ಲಿಯಗಿ, ಅಸ್ತವ್ಯಸ್ತವಾಗಿ ಹರಡಿ, ಸ್ಥಳವನ್ನು) ಗಲೀಜು ಮಾಡು; ಕಚಡ ಮಾಡು; ಕೊಳಕು ಮಾಡು: littered his clothings all over the place ಬಟ್ಟೆಗಳನ್ನು ಸಿಕ್ಕಾಬಟ್ಟೆ ಹರಡಿ ಆ ಸ್ಥಳವನ್ನು ಗಲೀಜು ಮಾಡಿದ್ದ.
  3. ( ಅಕರ್ಮಕ ಕ್ರಿಯಾಪದ ಸಹ) (ನಾಯಿಮರಿಗಳು ಮೊದಲಾದವನ್ನು) ಈನು; ಈಯು; ಮರಿಹಾಕು: wolves littered their young in deserted farmhouses ತೋಳಗಳು ಪಾಳು ಹೊಲಮನೆಗಳಲ್ಲಿ ತಮ್ಮ ಮರಿಗಳನ್ನು ಹಾಕಿದವು, ಈದವು.
  4. (ಕುದುರೆ ಮೊದಲಾದವಕ್ಕೆ ಹಾಸಿಗೆಯಾಗಿ ಹುಲ್ಲು ಮೊದಲಾದವನ್ನು) ಹಾಸು.
  5. (ಕುದುರೆಲಾಯದ ನೆಲದ ಮೇಲೆ) ಒಣಹುಲ್ಲು ಮೊದಲಾದವನ್ನು ಹರಡು, ಹಾಸು.
ಪದಗುಚ್ಛ

litter down = 2litter(4,5).