litotes ಲೈಟೋಟೀಸ್‍
ನಾಮವಾಚಕ

ಮಿತೋಕ್ತಿ; ಸೌಮ್ಯೋಕ್ತಿ:

  1. ವ್ಯಂಗ್ಯಾರ್ಥ ಸೂಚಿಸಲು ಬಳಸುವ ಸೌಮ್ಯ ಪದ, ಉದಾಹರಣೆಗೆ: ‘scoundrel’ is rather a rude word ‘ನೀಚ’ ಎನ್ನುವುದು ಸ್ವಲ್ಪಮಟ್ಟಿಗೆ ಒರಟಾದೀತು.
  2. (ಮುಖ್ಯವಾಗಿ ಆಕ್ಷೇಪಣೆಗೆ ಅವಕಾಶ ಕೊಡದಿರುವುದಕ್ಕಾಗಿ ಯಾ ಹೆಚ್ಚು ಪರಿಣಾಮವುಂಟುಮಾಡಲು) ಭಾವಾರ್ಥಕ ಪದದ ಬದಲಿಗೆ ಅದರ ವಿರುದ್ಧ ಪದದ ನಿಷೇಧರೂಪ ಬಳಸುವುದು: a citizen of no mean city (of an illustrious city ಎನ್ನಲು) ಯಾವುದೋ ಚಿಲ್ಲರೆ ಪಟ್ಟಣದ ಪ್ರಜೆಯಲ್ಲ (ಅಂದರೆ ಪ್ರಸಿದ್ಧ ಪಟ್ಟಣದ ಪ್ರಜೆ ಎಂದು ಅಭಿಪ್ರಾಯ). I shan’t be sorry (I shall be glad ಎನ್ನಲು) (ನನಗೆ ಸಂತೋಷ ಎನ್ನುವುದಕ್ಕೆ ಬದಲಾಗಿ) ನನಗೆ ದುಃಖವೇನೂ ಇಲ್ಲ.