literary ಲಿಟರರಿ
ಗುಣವಾಚಕ
  1. ಸಾಹಿತ್ಯದ; ಸಾಹಿತ್ಯಕ; ಸಾಹಿತ್ಯದ, ಗ್ರಂಥಗಳ ಯಾ ಲೇಖನಗಳ ರೂಪದ ಯಾ ಅವುಗಳಿಗೆ ಸಂಬಂಧಿಸಿದ: literary history of a thing (ಒಂದರ) ಸಾಹಿತ್ಯ ಚರಿತ್ರೆ.
  2. ಸಾಹಿತ್ಯಕ; ಒಳ್ಳೆಯ ಸಾಹಿತ್ಯ ಜ್ಞಾನವುಳ್ಳ, ಪಾಂಡಿತ್ಯವುಳ್ಳ.
  3. ಲೇಖನವೃತ್ತಿಯ; ಬರವಣಿಗೆಯಲ್ಲಿ ತೊಡಗಿದ ಯಾ ಆ ವೃತ್ತಿಯನ್ನು ಅವಲಂಬಿಸಿದ.
  4. (ಪದ, ನುಡಿಗಟ್ಟು, ಭಾಷಾಮರ್ಯಾದೆ, ಮೊದಲಾದವುಗಳ ವಿಷಯದಲ್ಲಿ) ಗ್ರಾಂಥಿಕ; ಗ್ರಂಥಗಳಲ್ಲಿ ಬಳಸುವ; ಮುಖ್ಯವಾಗಿ ಸಾಹಿತ್ಯಕ ಕೃತಿಗಳು ಯಾ ಇತರ ಬರಹಗಳಲ್ಲಿ ಬಳಸುವ: this work is too wordy and the dialogue has a literary flavour ಈ ಗ್ರಂಥ ವಿಪರೀತ ಶಬ್ದಾಡಂಬರದಿಂದ ಕೂಡಿದೆ ಮತ್ತು ಸಂಭಾಷಣೆಯಲ್ಲಿ ಗ್ರಾಂಥಿಕತೆಯ ಸೊಗಡಿದೆ.