See also 2literal
1literal ಲಿಟರಲ್‍
ಗುಣವಾಚಕ
  1. ವಾಚ್ಯಾರ್ಥ; ಅಕ್ಷರಾರ್ಥ; ಗೂಢಾರ್ಥ, ರೂಪಕಾರ್ಥಗಳನ್ನು ಬಿಟ್ಟು ಸಾಮಾನ್ಯ ಶಬ್ದಾರ್ಥವನ್ನು ಮಾತ್ರ ಪರಿಗಣಿಸುವ: I hear nothing in the literal sense of the word ನಾನು ಏನನ್ನೂ (ಕಿವಿಯಿಂದ) ಕೇಳಿಲ್ಲವೆಂಬುದು ಅಕ್ಷರಶಃ ನಿಜ.
  2. ಅಕ್ಷರಶಃ; ಪದಶಃ; ಮಕ್ಕಿ ಕಾ ಮಕ್ಕಿ; ಅಕ್ಷರಬದ್ಧ; ಪದನಿಷ್ಠ; ಯಥಾಮೂಲ: literal translation ಅಕ್ಷರಾನುವಾದ; ಅಕ್ಷರಶಃ ಮಾಡಿದ ಭಾಷಾಂತರ. a literal transcript ಯಥಾಮೂಲ ಪ್ರತಿ; ಯಥಾ ನಕಲು.
  3. (ವ್ಯಕ್ತಿಯ ವಿಷಯದಲ್ಲಿ) ಶುಷ್ಕ; ನೀರಸನಾದ; ಕಲ್ಪನಾರಹಿತನಾದ; ವಾಸ್ತವಾಂಶಕ್ಕೆ ಮಾತ್ರ ಗಮನಕೊಡುವ.
  4. (ಉತ್ಪ್ರೇಕ್ಷೆ ಇಲ್ಲದೆ) ವಾಸ್ತವವಾದ; ವಾಚ್ಯಾರ್ಥದಂತೆ ಇರುವ: literal decimation ನಿಜವಾಗಿ ದೊಡ್ಡ ಸಂಖ್ಯೆಯಲ್ಲಿ ನಾಶ. literal truth ಅಕ್ಷರಶಃ ನಿಜ; ಅಕ್ಷರ ಸತ್ಯ.
  5. (ಆಡುಮಾತು) (ಉತ್ಪ್ರೇಕ್ಷೆಯಿಂದ) ನಿಜವಾದ ಎಂದು ಕರೆದಿರುವ: a literal flood of pamphlets ಹಸ್ತಪ್ರತಿಗಳ ನಿಜವಾದ ಪ್ರವಾಹ.
  6. (ವರ್ಣಮಾಲೆಯ)
    1. ಅಕ್ಷರದ ಯಾ ಅಕ್ಷರಗಳ.
    2. ಅಕ್ಷರಾತ್ಮಕ; ಅಕ್ಷರದಲ್ಲಿ ಯಾ ಅಕ್ಷರಗಳಲ್ಲಿ ಇರುವ.
    3. ಅಕ್ಷರ ಸೂಚಿತ; ಅಕ್ಷರದಿಂದ ಯಾ ಅಕ್ಷರಗಳಿಂದ ಸೂಚಿತವಾದ, ವ್ಯಕ್ತಪಡಿಸಿದ.
  7. (ಬೀಜಗಣಿತ) ಅಕ್ಷರರೂಪ; ಅಕ್ಷರಾತ್ಮಕ; ಸಂಖ್ಯಾತ್ಮಕವಲ್ಲದ; ಸಂಖ್ಯೆಯಿಂದ ಸೂಚಿಸಿರದ.
ಪದಗುಚ್ಛ
  1. literal error ತಪ್ಪಚ್ಚು; ಮುದ್ರಣ ದೋಷ; ಮುದ್ರಣದ (ಯಾ ಮುದ್ರಣಾಕ್ಷರದ) ಸ್ಖಾಲಿತ್ಯ.
  2. literal interpretation ಶಾಬ್ದಿಕ ವ್ಯಾಖ್ಯಾನ; ಕೇವಲ ಶಬ್ದಾರ್ಥ ನಿರೂಪಣೆ; ಅಕ್ಷರಾರ್ಥ ವಿವರಣೆ.
See also 1literal
2literal ಲಿಟರ(ರ್‍)ಲ್‍
ನಾಮವಾಚಕ

(ಮುದ್ರಣ) ತಪ್ಪಚ್ಚು; ತಪ್ಪಕ್ಷರ; ಮುದ್ರಣದೋಷ; ಮುದ್ರಣ (ಯಾ ಮುದ್ರಣಾಕ್ಷರ) ಸ್ಖಾಲಿತ್ಯ.