listen ಲಿಸನ್‍
ಅಕರ್ಮಕ ಕ್ರಿಯಾಪದ
  1. (ಯಾವುದನ್ನಾದರೂ) ಕಿವಿಯಿಂದ ಕೇಳು; ಆಲಿಸು.
  2. (ವ್ಯಕ್ತಿ, ಶಬ್ದ ಯಾ ಕತೆಯನ್ನು) ಗಮನವಿಟ್ಟು ಆಲಿಸು; ಕಿವಿಗೊಟ್ಟು ಕೇಳು: listening to debates not very wise or witty ಅಷ್ಟೇನೂ ಹಾಸ್ಯಭರಿತವಲ್ಲದ ಅಥವಾ ವಿಚಾರಪೂರಿತವಲ್ಲದ ಚರ್ಚೆಗಳನ್ನು ಕೇಳುತ್ತ.
  3. ಕಿವಿಗೊಡು; ಆಲಿಸು; ಯವುದಾದರೂ ಶಬ್ದ, ಮಾತು, ಕಥೆ, ಮೊದಲಾದವನ್ನು ಕಿವಿಗೊಟ್ಟು ಕೇಳು.
  4. (ಅಹವಾಲು, ಮೊರೆ, ಮೊದಲಾದವನ್ನು ಸಲ್ಲಿಸುವ ವ್ಯಕ್ತಿಗೆ) ಕಿವಿಗೊಡು; ಮಣಿ; ಅವುಗಳನ್ನು ಮನ್ನಿಸು, ಒಪ್ಪು: they found him always ready to listen to their little distresses ಅವನು ತಮ್ಮ ಸಣ್ಣ ಪುಟ್ಟ ತೊಂದರೆಗಳಿಗೆ ಕಿವಿಗೊಡಲು ಸದಾ ಸಿದ್ಧನೆಂದು ಅವರಿಗೆ ತಿಳಿದಿತ್ತು.
  5. (ಪ್ರಾಚೀನ ಪ್ರಯೋಗ) (ಪ್ರಲೋಭನೆ ಮೊದಲಾದವುಗಳಿಗೆ) ಈಡಾಗು; ಸಿಕ್ಕಿಬೀಳು; ಗುರಿಯಾಗು: listen not to his temptation ಅವನ ಪ್ರಲೋಭನೆಗೆ ಸಿಕ್ಕಬೇಡ.
ಪದಗುಚ್ಛ
  1. listen in
    1. ಕದ್ದು ಕೇಳು; ಕದ್ದಾಲಿಸು; ಹೊಂಚಿಕೇಳು; ಮತ್ತೊಬ್ಬರಿಗೆ ಹೇಳುತ್ತಿರುವ ಮಾತು, ಕಳುಹಿಸಿದ ದೂರವಾಣಿ, ಮೊದಲಾದವನ್ನು ತಾನು ಕೇಳಲಾಗುವಂತೆ ಅನುಕೂಲಪಡಿಸಿಕೊಂಡು ಆಲಿಸು.
    2. ಆಕಾಶವಾಣಿಯನ್ನು ಕೇಳು; ಆಕಾಶವಾಣಿಯಲ್ಲಿ ಬಿತ್ತರಿಸುವ ಸುದ್ದಿ ಮೊದಲಾದವನ್ನು ಆಲಿಸು.
  2. listen (out) for ಎಚ್ಚರಿಕೆಯಿಂದ ಕಾಯುತ್ತಾ (ಶಬ್ದ ಮೊದಲಾದವನ್ನು) ಕೇಳಲು ಪ್ರಯತ್ನಿಸು: listen out for the phone while I am in the bath ನಾನು ಸ್ನಾನದ ಮನೆಯಲ್ಲಿರುವಾಗ ಬರುವ ದೂರವಾಣಿಯನ್ನು ಎಚ್ಚರವಿಟ್ಟು ಕೇಳು.