See also 2liquor
1liquor ಲಿಕರ್‍
ನಾಮವಾಚಕ
  1. ಲಿಕರು; ಆಲ್ಕಹಾಲಿನ (ಮುಖ್ಯವಾಗಿ ಬಟ್ಟಿಯಿಳಿಸಿದ) ದ್ರವ, ಪಾನ, ಪಾನೀಯ: malt liquor ಧಾನ್ಯ(ದಿಂದ ಬಟ್ಟಿಯಿಳಿಸಿದ) ಮದ್ಯ.
  2. ಕುದಿಸಲು, ಹುಳಿಯಿಸಲು, ಬಟ್ಟಿಯಿಳಿಸಲು ಬಳಸುವ ನೀರು.
  3. ಕಟ್ಟು; ಆಹಾರ ಪದಾರ್ಥವನ್ನು ಬೇಯಿಸಿದ ನೀರು.
  4. (ಔಷಧಶಾಸ್ತ್ರ) (ಉಚ್ಚಾರಣೆ ಲಿಕ್ವಾರ್‍, ಲೈಕ್ವಾರ್‍) ಔಷಧ ದ್ರಾವಣ; ಒಂದು ಗೊತ್ತಾದ ಔಷಧಿಯನ್ನು ನೀರಿನಲ್ಲಿ ಕರಗಿಸಿದ ದ್ರಾವಣ: liquor ammonia etc. ಅಮೋನಿಯಾ ಮೊದಲಾದವುಗಳ ದ್ರಾವಣ.
  5. (ಸ್ರಾವದ ಯಾ ರಾಸಾಯನಿಕ ಕ್ರಿಯೆಯ ಉತ್ಪನ್ನವಾಗಿ ಬಂದ) ದ್ರವಾಂಶ.
  6. ತೊಳೆಯುವುದು, ತೋಯಿಸಿಡುವುದು, ಮೊದಲಾದವಕ್ಕೆ ಬಳಸುವ ದ್ರವ.
  7. ಸಾರಾಯಿ ನೀರು; ಮದ್ಯಜಲ; ಸಾರಾಯಿ ತಯಾರಿಕೆಯಲ್ಲಿ ಉಪಯೋಗಿಸುವ ನೀರು.
ಪದಗುಚ್ಛ
  1. a liquor (or liquor-up) (ಅಶಿಷ್ಟ) ದಣಿವಾರಿಕೆಗೆ, ಮನಸ್ಸಿನ ಉಲ್ಲಾಸಕ್ಕೆ ಕುಡಿಯುವ ಮದ್ಯ.
  2. disguised with liquor (ಕುಡಿತದಿಂದ) ಅಮಲೇರಿದ; ಮತ್ತು ಬಂದ.
  3. in liquor, the worse for liquor (ತಕ್ಕಮಟ್ಟಿಗೆ) ಕುಡಿದು ಅಮಲೇರಿ.
  4. spirituous liquor ಮದ್ಯಸಾರ ಪಾನೀಯಗಳು; ಮದ್ಯಸಾರ ಹೆಚ್ಚಾಗಿರುವ ಸಾರಾಯಿ.
See also 1liquor
2liquor ಲಿಕರ್‍
ಸಕರ್ಮಕ ಕ್ರಿಯಾಪದ
  1. (ತೊಗಲು, ಜೋಡು – ಇವನ್ನು) ಚರಬಿಯಿಂದ ಯಾ ಎಣ್ಣೆಯಿಂದ ತಿಕ್ಕಿ ನಯಮಾಡು; ಚರಬಿ ಯಾ ಎಣ್ಣೆ ಬಳಿ.
  2. (ಮೊಳೆತ ಧಾನ್ಯ ಮೊದಲಾದವನ್ನು) ನೀರಿನಲ್ಲಿ – ನೆನೆಹಾಕು, ನೆನೆಯಿಡು, ಉನಿಯಿಸು.
  3. (ಅಶಿಷ್ಟ) ಒಂದು ಕುಡಿತ ಸಾರಾಯಿ ಕುಡಿ.
ಪದಗುಚ್ಛ

liquor-up = 2liquor(3).