See also 2liquid
1liquid ಲಿಕ್ವಿಡ್‍
ಗುಣವಾಚಕ
  1. (ಪದಾರ್ಥಗಳ ವಿಷಯದಲ್ಲಿ) ದ್ರವ; ದ್ರವ ಸ್ಥಿತಿಯಲ್ಲಿರುವ; ಘನಸ್ಥಿತಿಯಲ್ಲಿರುವಂತೆ ನಿರ್ದಿಷ್ಟ ಆಕಾರವಿಲ್ಲದ, ಹರಿಯಬಲ್ಲ, ಆದರೆ ಅನಿಲದಂತೆ ಯಾವ ಗಾತ್ರಕ್ಕೆ ಬೇಕಾದರೂ ಹಿಗ್ಗಲಾರದ ಸ್ಥಿತಿಯ: liquid air ದ್ರವವಾಯು; ಹೆಚ್ಚಿನ ಒತ್ತಡ ಮತ್ತು ಅತಿ ಶೈತ್ಯದಿಂದ ದ್ರವ ಸ್ಥಿತಿಗೆ ಬಂದಿರುವ ವಾಯು.
  2. (ಕಾವ್ಯಪ್ರಯೋಗ ಮತ್ತು ಆಲಂಕಾರಿಕ ಪ್ರಯೋಗ) ನೀರಿನ; ನೀರಾದ; ನೀರಿನಂತಿರುವ; ತೆಳುವಾದ; ನೀರುನೀರಾದ: the strong bark cut through liquid mountains ಗಟ್ಟಿಯಾದ ಹಡಗು ನೀರಿನ ಬೆಟ್ಟಗಳನ್ನು ಭೇದಿಸಿಕೊಂಡು ಹೋಯಿತು.
  3. (ನೀರಿನಂತೆ, ದ್ರಾಕ್ಷಾಮದ್ಯದಂತೆ) ಪಾರದರ್ಶಕವಾಗಿರುವ; ಪಾರಕವಾಗಿರುವ ಯಾ ಹೊಳಪುಳ್ಳ: liquid lustre, eyes, sky, air, blue ಪಾರದರ್ಶಕ – ಹೊಳಪು, ಕಣ್ಣುಗಳು, ಆಕಾಶ, ಗಾಳಿ, ನೀಲಿ.
  4. ದ್ರವ; (ಅನಿಲದ, ಉದಾಹರಣೆಗೆ ಗಾಳಿ, ಹೈಡ್ರೊಜನ್‍ಗಳ ವಿಷಯದಲ್ಲಿ) ತೀವ್ರವಾದ ಶೈತ್ಯದಿಂದ ದ್ರವ ಸ್ಥಿತಿಗೆ ಇಳಿದ.
  5. (ಧ್ವನಿವಿಜ್ಞಾನ) ದ್ರವ; ಸ್ವಲ್ಪವೇ ಅಡಚಣೆಯಿದ್ದು, ಘೃಷ್ಟವಲ್ಲದ; ಸ್ವರದಂತೆ ಲಂಬಿಸಬಹುದಾದ, ಉದಾಹರಣೆಗೆ ಇಂಗ್ಲಿಷಿನ l,r.
  6. (ಧ್ವನಿಯ, ನಾದಗಳ ವಿಷಯದಲ್ಲಿ) ನಿರರ್ಗಳ; ಶುದ್ಧ; ಸ್ವಚ್ಛ; ತಿಳಿಯಾದ; ಲಲಿತವಾದ; ಕರ್ಕಶವಲ್ಲದ; ಕಿವಿಗೆ ಹಿತವಾದ; ಸ್ಫುಟವಾಗಿ, ಅಡೆತಡೆಯಿಲ್ಲದೆ ಹರಿಯುವ; ಸ್ವರಸದೃಶ; ಸ್ವರದಂಥ: black-bird’s liquid notes ಬ್ಲ್ಯಾಕ್‍ಬರ್ಡ್‍ ಹಕ್ಕಿಯ ಶುದ್ಧಸ್ವರಗಳು. in his liquid Italian ಅವನ ಲಲಿತವಾದ ಇಟ್ಯಾಲಿಯನ್‍ ಭಾಷೆಯಲ್ಲಿ.
  7. (ಆಸ್ತಿ, ಆಧಾರಪತ್ರ, ಮೊದಲಾದವುಗಳ ವಿಷಯದಲ್ಲಿ) ಹಣದ ರೂಪದಲ್ಲಿರುವ ಯಾ ಸುಲಭವಾಗಿ ಹಣಕ್ಕೆ ಮಾರ್ಪಡಿಸಲಾಗುವ.
  8. (ಅಭಿಪ್ರಾಯಗಳು ಮೊದಲಾದವುಗಳ ವಿಷಯದಲ್ಲಿ) ಅಸ್ಥಿರ; ಚಂಚಲ; ದೃಢವಲ್ಲದ: he has very liquid convictions or principles ಅವನ ನಂಬಿಕೆಗಳು ಯಾ ತತ್ತ್ವಗಳು ಬಹಳ ಚಂಚಲವಾದುವು.
See also 1liquid
2liquid ಲಿಕ್ವಿಡ್‍
ನಾಮವಾಚಕ
  1. ದ್ರವ; ದ್ರವಸ್ಥಿತಿಯಲ್ಲಿರುವ ಪದಾರ್ಥ.
  2. (ಧ್ವನಿವಿಜ್ಞಾನ) ದ್ರವಾಕ್ಷರ; ಮೃದುವರ್ಣ; ಇಂಗ್ಲಿಷಿನ l ಯಾ r, ಕೆಲವು ವೇಳೆ m, n- ಇವುಗಳಲ್ಲಿ ಯಾವುದಾದರೂ ಒಂದು.