lion ಲೈಅನ್‍
ನಾಮವಾಚಕ

(ಸ್ತ್ರೀಲಿಂಗ lioness ಉಚ್ಚಾರಣೆ ಲೈಅನಿಸ್‍).

  1. (ಆಹ್ರಿಕ ಮತ್ತು ಉತ್ತರ ಏಷ್ಯಾದ) ಸಿಂಹ; ಸಿಂಗ.
  2. (the Lion) (ಖಗೋಳ ವಿಜ್ಞಾನ) ಸಿಂಹರಾಶಿ; ಸಿಂಹ ನಕ್ಷತ್ರಪುಂಜ; ಸಿಂಹ ತಾರಾಮಂಡಲ.
  3. ಸಿಂಹ; ಧೀರ; ಧೈರ್ಯಶಾಲಿ; ಎದೆಗಾರ; ಕೆಚ್ಚೆದೆಯವ; ದಿಟ್ಟ(ತನದ) ವ್ಯಕ್ತಿ.
  4. ಸಿಂಹ; ಗ್ರೇಟ್‍ ಬ್ರಿಟನ್ನಿನ ರಾಷ್ಟ್ರ ಲಾಂಛನ ಯಾ ವಂಶಲಾಂಛನದಲ್ಲಿನ ಸಿಂಹದ ಚಿತ್ರ: the British Lion (ಮೂರ್ತೀಕೃತ) ಬ್ರಿಟಿಷ್‍ ರಾಷ್ಟ್ರ; ಬ್ರಿಟಿಷ್‍ ಜನಾಂಗ.
  5. (ಬಹುವಚನದಲ್ಲಿ) (ಪಟ್ಟಣ ಮೊದಲಾದವುಗಳಲ್ಲಿ) ನೋಡಬೇಕಾದ ನೋಟಗಳು; ಪ್ರೇಕ್ಷಣೀಯ ದೃಶ್ಯಗಳು, ಸ್ಥಳಗಳು: see, show the lions ಪ್ರೇಕ್ಷಣೀಯ ಸ್ಥಳಗಳನ್ನು (ನೋಟಗಳನ್ನು) ನೋಡು; ಪ್ರೇಕ್ಷಣೀಯ ದೃಶ್ಯಗಳನ್ನು ತೋರಿಸು.
  6. (ಸಾಮಾಜಿಕ ಸಭೆಗಳಲ್ಲಿ, ಮಿತ್ರಗೋಷ್ಠಿಗಳಲ್ಲಿ ಎಲ್ಲರ ಮುಂದೆ ಮೆರೆಸಲು ಹುಡುಕಿ ಕರೆತರುವ) ಪ್ರಸಿದ್ಧ – ಸಾಹಿತಿ ಯಾ ವ್ಯಕ್ತಿ; ಪ್ರತಿಷ್ಠಿತ ವ್ಯಕ್ತಿ; ಸಿಂಹ: lion hunter ಇಂಥ ವ್ಯಕ್ತಿಯನ್ನು ಬಹಳವಾಗಿ ಅವಲಂಬಿಸುವ – ಆತಿಥೇಯ(ಳು), ಸತ್ಕಾರಗಾರ ಯಾ ಸತ್ಕಾರಗಿತ್ತಿ; ಪ್ರಸಿದ್ಧ ಪುರುಷರ ಯಾ ಸಾಹಿತಿಗಳ ಬೇಟೆಗಾರ್ತಿ ಯಾ ಬೇಟೆಗಾರ.
  7. (Lion) (ಸಮಾಜಸೇವೆಗಾಗಿ ಸ್ಥಾಪಿಸಿರುವ ಅಂತರರಾಷ್ಟ್ರೀಯ) ಲಯನ್‍ (ಕ್ಲಬ್ಬಿನ ಸದಸ್ಯ).
  8. (Lions) ಬ್ರಿಟನ್ನಿನ ಅಂತರರಾಷ್ಟ್ರೀಯ ರಗ್ಬಿ ಯೂನಿಯನ್‍ (ಹುಟ್‍ಬಾಲ್‍) ತಂಡ.
ಪದಗುಚ್ಛ
  1. lion and unicorn ಬ್ರಿಟನ್ನಿನ ರಾಜವಂಶ ಲಾಂಛನವನ್ನು ಎತ್ತಿಹಿಡಿದಿರುವಂತೆ ಚಿತ್ರಿಸಿರುವ ಸಿಂಹ ಮತ್ತು ಏಕಶೃಂಗಿ ಪ್ರಾಣಿ.
  2. lion skin ಸಿಂಹವೇಷ; ಸಿಂಹದ ಚರ್ಮ; ಹುಸಿ ಧೈರ್ಯ; ತೋರ್ಕೆಯ ಧೈರ್ಯ.
  3. lion’s provider (ಪ್ರಾಚೀನ ಪ್ರಯೋಗ) ನರಿ (ರೂಪಕವಾಗಿಸಹ).
ನುಡಿಗಟ್ಟು
  1. $^2$beard the lion in his den.
  2. lion in the path (ಮುಖ್ಯವಾಗಿ ಊಹಾಕಲ್ಪಿತ) ಅಡ್ಡಿ; ಅಡಚಣೆ; ಎಡರು; ವಿಘ್ನ; ತೊಡರು: the indecisive man always sees a lion in the path ನಿರ್ಧಾರವಿಲ್ಲದ ಮನುಷ್ಯ ಯಾವಾಗಲೂ ತನ್ನ ಹಾದಿಯಲ್ಲಿ ಅಡಚಣೆಯನ್ನೇ ಕಾಣುತ್ತಾನೆ.
  3. lion in the way = ನುಡಿಗಟ್ಟು \((2)\).
  4. lion’s mouth ಸಿಂಹದ ಬಾಯಿ; ಅಪಾಯಕರ ಸ್ಥಿತಿ, ಸ್ಥಾನ: test pilots fly constantly into the lion’s mouth ವಿಮಾನ ಪರೀಕ್ಷೆ ಚಾಲಕರು ಸದಾ ಸಿಂಹದ ಬಾಯೊಳಕ್ಕೆ ನುಗ್ಗಿರುತ್ತಾರೆ.
  5. the lion’s share ಸಿಂಹಪಾಲು; ಅತ್ಯಧಿಕ ಯಾ ಅತ್ಯುತ್ತಮ ಭಾಗ: bear the lion’s share of the expenses ವೆಚ್ಚದ, ಹೆಚ್ಚಿನ ಭಾಗ ಹೊರು.
  6. twist lion’s tail (ಪರದೇಶಗಳ, ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ಸಂಗೀತ, ಸಂಗೀತ ದ ಪತ್ರಿಕೋದ್ಯೋಗಿಗಳು ಯಾ ವಾಗ್ಮಿಗಳ ವಿಷಯದಲ್ಲಿ) ಇಂಗ್ಲೆಂಡನ್ನು – ಹೀಯಾಳಿಸು, ಮೂದಲಿಸು, ವಿರೋಧಿಸು, ಪ್ರತಿಭಟಿಸು.