See also 2link  3link
ನಾಮವಾಚಕ
  1. (ಸರಪಣಿ ಮೊದಲಾದವುಗಳ ಒಂದು) ಉಂಗುರ; ಕೊಂಡಿ; ತಳಕು; ಗೊಣಸು.
  2. ಸಂಪರ್ಕಕೊಂಡಿ; ಕೂಡುಕೊಂಡಿ; ಸಂಬಂಧವುಂಟುಮಾಡುವ ಭಾಗ; ಮುಖ್ಯವಾಗಿ ಕೂಡಿಸುವ ಯಾ ನಿರಂತರತೆಯನ್ನು ಒದಗಿಸುವ ವಸ್ತು ಯಾ ವ್ಯಕ್ತಿ ಶ್ರೇಣಿಯಲ್ಲಿ ಒಂದು: the letters that were her last link with the past ಗತಕಾಲಕ್ಕೂ ಅವಳಿಗೂ ಕೊನೆಯ ಕೊಂಡಿಯಾಗಿದ್ದ ಪತ್ರಗಳು.
  3. ಸಂಬಂಧಕ; ಸಂಯೋಜಕ; ಸಂಬಂಧಕಾರಿ; ಸಂಬಂಧಸಾಧನ; ಕೂಡಿಸುವ ಸ್ಥಿತಿ ಯಾ ಸಾಧನ; ಇತರರನ್ನು ಯಾ ಇತರ ವಸ್ತುಗಳನ್ನು ಕೂಡಿಸುವ ವಸ್ತು.
    1. ಸಂಪರ್ಕ; ಲಿಂಕು; ಎರಡು ಸ್ಥಳಗಳ ನಡುವೆ ರೇಡಿಯೋ ಯಾ ಟೆಲಿಹೋನ್‍ ಸಂಪರ್ಕ ಕಲ್ಪಿಸುವ ವಿಧಾನ.
    2. ಎರಡು ಸ್ಥಳಗಳ ನಡುವೆ ಪ್ರಯಾಣ ಯಾ ಸಾರಿಗೆ ಸಾಗಾಣಿಕೆ ಮಾಡುವ ಸಾಧನ.
  4. = cuff-links.
  5. (ಅಳತೆಯಲ್ಲಿ) ಮೋಜಣಿ ಕೊಂಡಿ; ಮೋಜಣಿ ಸರಪಳಿಯ ನೂರನೇ ಒಂದು ಭಾಗ (= $7.92$ ಅಂಗುಲಗಳು).
  6. (ಹೆಣಿಗೆ ಮೊದಲಾದವುಗಳಲ್ಲಿ) ಕುಣಿಕೆ.
  7. ಅಂತರಪೂರಕ; ಸಂದು, ತೆರಪು ತುಂಬಿಸುವ ವಸ್ತು ಮೊದಲಾದವು; ಬಿಟ್ಟು ಹೋಗಿರುವುದರ ಸ್ಥಳವನ್ನು ತುಂಬುವಂಥದು.
  8. ಕೊಂಡಿ; ಒಂದು ಶ್ರೇಣಿಯ ಅಂಶ, ಭಾಗ: missing link ಲುಪ್ತ ಕೊಂಡಿ; ಸರಣಿಯಲ್ಲಿ ಬಿಟ್ಟುಹೋಗಿರುವ ಕೊಂಡಿ.
See also 1link  3link
ಸಕರ್ಮಕ ಕ್ರಿಯಾಪದ
  1. (ವಸ್ತುಗಳನ್ನು, ವ್ಯಕ್ತಿಗಳನ್ನು ಪರಸ್ಪರ ಯಾ ಇನ್ನೊಂದರೊಂದಿಗೆ) ಕೂಡಿಸು; ಸೇರಿಸು; ಸಂಬಂಧಿಸು; ಸಂಯೋಜಿಸು; ತಗುಲಹಾಕು; ಗಂಟುಹಾಕು; ತಳಕು ಹಾಕು; ಜೊತೆಗೂಡಿಸು.
  2. (ಕೈಗಳನ್ನು ಪರಸ್ಪರ ಸೇರಿಸಿ) ಹಿಡಿದುಕೊ.
  3. (ಮತ್ತೊಬ್ಬನ ತೋಳಿನೊಳಗೆ ತೋಳು ಹಾಕಿ) ತೆಕ್ಕೆಗಟ್ಟು; ತೋಳಿಗೆ ತೋಳು ತಳಕು ಹಾಕು.
ಅಕರ್ಮಕ ಕ್ರಿಯಾಪದ

(ಪದ್ಧತಿ, ವ್ಯವಸ್ಥೆ, ಸಂಘ, ಮೊದಲಾದವಕ್ಕೆ) ಸೇರಿಕೊ; ಸೇರು; ಸಂಬಂಧ ಕಲ್ಪಿಸಿಕೊ; ತಳುಕು ಹಾಕಿಕೊ.

ಪದಗುಚ್ಛ

link up with

  1. ಕೂಡಿಸು; ಸೇರಿಸು.
  2. ಕೂಡಿಕೊ; ಸೇರಿಕೊ.
See also 1link  2link
ನಾಮವಾಚಕ

(ಚರಿತ್ರೆ) (ಹಿಂದೆ, ಬೀದಿಯಲ್ಲಿ ಓಡಾಡುವ ಜನರಿಗೆ ದಾರಿ ಕಾಣುವುದಕ್ಕಾಗಿ ಬಳಸುತ್ತಿದ್ದ) ದೀವಟಿಗೆ; ಮಷಾಲು; ಹಿಲಾಲು; ಸೂಡಿ; ಸೂಟೆ; ಕಲ್ಲರಗು ಮತ್ತು ನಾರುಗುಂಜಿನ ದೊಂದಿ, ಪಂಜು.