linger ಲಿಂಗರ್‍
ಸಕರ್ಮಕ ಕ್ರಿಯಾಪದ
  1. ನಿಧಾನವಾಗಿ ಕಾಲಕಳೆ; ಕಾಲಹರಣ ಮಾಡು; ಕಾಲವ್ಯಯ ಮಾಡು.
  2. ತಡಮಾಡಿ ಕಾಲ ಕಳೆದುಬಿಡು; ಸಾವಕಾಶ ಮಾಡಿ ಸಮಯ, ಕಾಲ – ಹಾಳು ಮಾಡು, ಪೋಲು ಮಾಡು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹೋಗಲು ಮನಸ್ಸಿಲ್ಲದೆ) ಹೊರಡುವುದನ್ನು – ತಡಮಾಡು, ವಿಲಂಬ ಮಾಡು; ಅಲ್ಲೇ ಸ್ವಲ್ಪ ಹೊತ್ತು ಉಳಿ.
  2. (ಒಂದು ಸ್ಥಳವನ್ನು, ವಿಷಯವನ್ನು ಬಿಟ್ಟು ಮುಂದೆ ಹೋಗದೆ) ಅಲ್ಲಲ್ಲೇ – ತಿರುಗಾಡು, ಸುತ್ತಾಡು, ಬಳಸಾಡು, ಸುಳಿದಾಡು, ಕಾಲೆಳೆ: she lingered in delight over every one of the places ಪ್ರತಿಯೊಂದು ಸ್ಥಳದಲ್ಲಿಯೂ ಅವಳು ಅದನ್ನು ಬಿಟ್ಟು ಮುಂದೆ ಹೋಗದೆ ಅಲ್ಲಲ್ಲಿಯೇ ಸುತ್ತಾಡಿದಳು. lingered on what they said ಅವರು ಹೇಳಿದ್ದನ್ನೇ ಚಿಂತಿಸುತ್ತಾ ಹೋದೆವು.
  3. ಅಲ್ಲಿಯೇ ಉಳಿ; ನಿರೀಕ್ಷಿಸಿದ ಯಾ ಸರಿಯಾದ ಕಾಲಕ್ಕೆ ಹೊರಡದಿರು ಯಾ ಬಂದು ಸೇರದಿರು: we lingered a while after the party ಸಂತೋಷಕೂಟ ಮುಗಿದ ಮೇಲೆ ನಾವು (ಹೊರಡುವ ಮನಸ್ಸಿಲ್ಲದೆ) ಸ್ವಲ್ಪ ಹೊತ್ತು ಅಲ್ಲಿಯೇ ಉಳಿದೆವು.
  4. (ಮುಖ್ಯವಾಗಿ ರೋಗದ ವಿಷಯದಲ್ಲಿ) ಬಹುಕಾಲ ಎಳೆ; ದೀರ್ಘ ಕಾಲವಿರು: lingering disease ಬಹುಕಾಲ ಎಳೆಯುವ ರೋಗ. lingering agonies ಬಹುಕಾಲ ಎಳೆಯುವ ಯಾತನೆಗಳು.
  5. (ರೋಗದಿಂದ ಅಶಕ್ತರಾದವರು, ಸಾಯುತ್ತಿರುವ ರೋಗಿ, ರೂಢಿಯಳಿಯುತ್ತಿರುವ ಪದ್ಧತಿಗಳ ವಿಷಯದಲ್ಲಿ) ಉಸಿರಾಡಿಕೊಂಡಿರು; ಉಸಿರು ಹಿಡಿದುಕೊಂಡಿರು; ನರಳಿಕೊಂಡಿರು; ನರಳುತ್ತಾ ಕಾಲಹಾಕು; ದುರ್ಬಲವಾಗಿದ್ದರೂ ಉಳಿದುಕೊಂಡಿರು; ಹೇಗೋ ಕಾಲಯಾಪನೆ ಮಾಡುತ್ತಿರು, ಜೀವವಿಟ್ಟುಕೊಂಡಿರು: he lingered only a few months after his heart attack ಹೃದಯಾಘಾತವಾದ ಮೇಲೆ ಕೆಲವು ತಿಂಗಳುಗಳು ಮಾತ್ರ ಅವನು ಹೇಗೋ ಉಸಿರೆಳೆದುಕೊಂಡಿದ್ದ. the custom still lingers (on) in some villages ಆ ಪದ್ಧತಿ ಕೆಲವು ಹಳ್ಳಿಗಳಲ್ಲಿ ಇನ್ನೂ ಉಳಿದಿದೆ, ಜೀವಂತವಾಗಿದೆ.
  6. ತಡಮಾಡು; ನಿಧಾನ, ಛಾನಸ, ವಿಲಂಬ – ಮಾಡು; ತಾಮಸದಿಂದಿರು; ಯಥಾ ಸಾವಕಾಶವಾಗಿರು: linger in discharging one’s duties ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿ ನಿಧಾನವಾಗಿರು, ಯಥಾ ಸಾವಕಾಶವಾಗಿರು.