linear ಲಿನಿಅರ್‍
ಗುಣವಾಚಕ
  1. ರೇಖೆಯ ಯಾ ರೇಖೆಗಳ; ಗೆರೆಯ.
  2. ರೇಖೀಯ; ರೇಖಾತ್ಮಕ; ರೇಖಾರೂಪದ; ರೇಖೆಯಾಗಿ ಯಾ ರೇಖೆಗಳ ರೂಪದಲ್ಲಿ ಇರುವ ಯಾ ನಿರೂಪಿಸಿದ: linear series ರೇಖಾನುಕ್ರಮ; ರೇಖೆಯಾಗಿ ನಿರೂಪಿಸಿದ ಕ್ರಮ ವ್ಯವಸ್ಥೆ. linear design ರೇಖಾವಿನ್ಯಾಸ; ರೇಖಾತ್ಮಕ ವಿನ್ಯಾಸ. linear nebulae ರೇಖಾನೀಹಾರಿಕೆ.
  3. ರೇಖೀಯ; ಗೆರೆಯಂತಿರುವ; ಉದ್ದವಾಗಿಯೂ ಕಿರಿದಾಗಿಯೂ ಒಂದೇ ಅಗಲವುಳ್ಳದ್ದಾಗಿಯೂ ಇರುವ: a linear leaf ಗೆರೆ ಎಲೆ; ಲಂಬಪತ್ರ; ರೇಖಾತ್ಮಕ ಪತ್ರ; ಗೆರೆಯಂತಿರುವ ಎಲೆ.
  4. (ಗಣಿತ, ಭೌತವಿಜ್ಞಾನ) ರೇಖೀಯ:
    1. ಒಂದು ಆಯಾಮದಲ್ಲಿ ಮಾಡುವ ಅಳತೆಗಳನ್ನು ಮಾತ್ರ ಒಳಗೊಂಡಿರುವ.
    2. (ಸಮೀಕರಣದ ವಿಷಯದಲ್ಲಿ) ಮೊದಲನೆ ವರ್ಗದ; ಘಾತವಿರುವ ಪದಗಳಿಲ್ಲದ: linear equation ರೇಖೀಯ ಸಮೀಕರಣ.
ಪದಗುಚ್ಛ
  1. Linear A ಲಿನಿಯರ್‍ A; ಗ್ರೀಕ್‍ ದ್ವೀಪವಾದ ‘ಕ್ರೀಟ್‍’ ಎಂಬಲ್ಲಿ ಎ.ಜೆ. ಈವನ್ಸ್‍ ಎಂಬಾತ 1894–1901ರ ನಡುವೆ ಕಂಡುಹಿಡಿದ, ಮಣ್ಣಿನ ಫಲಕಗಳು, ಮಡಿಕೆ ಕುಡಿಕೆಗಳು, ಮೊದಲಾದವುಗಳ ಮೇಲಿದ್ದ, ಕಂಚಿನ ಯುಗದ ಎರಡು ಬಗೆಯ ಬರಹಗಳಲ್ಲಿ ಮೊದಲನೆಯದು.
  2. Linear B ಲಿನಿಯರ್‍ B; ಮೈಸೀನಿಯನ್‍ ಗ್ರೀಕ್‍ ಭಾಷೆಯನ್ನು ಬರೆಯಲು ಅಳವಡಿಸಿಕೊಂಡ, ಕಂಚಿನ ಯುಗದ ಎರಡು ಬಗೆಯ ಬರಹಗಳಲ್ಲಿ ಈಚಿನದು.