See also 2limit
1limit ಲಿಮಿಟ್‍
ನಾಮವಾಚಕ
  1. ಗಡಿ; ಮೇರೆ; ಎಲ್ಲೆ; ಸರಹದ್ದು; ಸೀಮಾ(ರೇಖೆ).
  2. (ಹಲವೊಮ್ಮೆ ಬಹುವಚನದಲ್ಲಿ) (ಒಂದು ಪ್ರದೇಶದ) ಗಡಿಗೆರೆ; ಸೀಮಾ ರೇಖೆ.
  3. ತುದಿ; ಕೊನೆ; ಪರಿಮಿತಿ; ಅವಧಿ; ಅಂತ್ಯ – ಬಿಂದು, ಸ್ಥಾನ.
  4. (ಅವಕಾಶವಿರುವ ಯಾ ಸಾಧ್ಯವಿರುವ) ಗರಿಷ್ಠ ಯಾ ಕನಿಷ್ಠ ಮೊತ್ತ, ಪ್ರಮಾಣ, ಮಿತಿ: upper limit ಗರಿಷ್ಠ ಮಿತಿ. lower limit ಕನಿಷ್ಠ ಮಿತಿ.
  5. (ಗಣಿತ) ಗಣಿತ ಫಲನ ಯಾ ಗಣಿತ ಶ್ರೇಢಿಯೊಂದು ಯಾವ ಮೌಲ್ಯವನ್ನು ಮೀರಲಾರದಾಗಿದ್ದು, ಆ ಮೌಲ್ಯದ ಅತಿ ಸಮೀಪಕ್ಕೆ ಸಾರುವುದೋ ಆ ಮೌಲ್ಯ.
  6. ಲಕ್ಷ್ಮಣ – ರೇಖೆ, ಗೆರೆ; ದಾಟಬಾರದ ಯಾ ದಾಟಲಾರದ – ಪ್ರದೇಶ, ಗೆರೆ ಯಾ ಬಿಂದು.
ಪದಗುಚ್ಛ
  1. be the limit (ಆಡುಮಾತು) ಅಸಹನೀಯವಾಗಿರು ಯಾ ಬಹಳ ಕಿರಿಕಿರಿಯುಂಟು ಮಾಡು.
  2. inferior limit
    1. ಅತಿ ಈಚಿನ ತಾರೀಖು.
    2. ಕನಿಷ್ಠ ಮೊತ್ತ, ಪ್ರಮಾಣ; ಕೊಡಬಲ್ಲ ಯಾ ಕೊಡಬಹುದಾದ ಅತ್ಯಲ್ಪ, ಅತ್ಯಂತ ಕಡಿಮೆ ಮೊತ್ತ.
  3. is the limit (ಅಶಿಷ್ಟ) ಇದೇ ಪರಮಾವಧಿ! ಇಲ್ಲಿಂದಾಚೆಗೆ, ಇನ್ನು ಸಹಿಸಲಾಗುವುದಿಲ್ಲ.
  4. off limits (ಅಮೆರಿಕನ್‍ ಪ್ರಯೋಗ) ಮಿತಿಮೀರಿ; ಎಲ್ಲೆ ದಾಟಿ; ಅತಿಕ್ರಮಿಸಿ.
  5. superior limit
    1. ಅತ್ಯಂತ ಹಿಂದಿನ ತಾರೀಖು.
    2. ಗರಿಷ್ಠ – ಮೊತ್ತ, ಪ್ರಮಾಣ; ಕೊಡಬಲ್ಲ ಯಾ ಕೊಡಬಹುದಾದ ಅತ್ಯಂತ ಹೆಚ್ಚಿನ ಮೊತ್ತ.
  6. within limits ಸ್ವಲ್ಪಮಟ್ಟಿಗೆ; ಅತಿಗೆ ಹೋಗದೆ; ಮಿತವಾಗಿ; ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಹೊಂದಿ.
  7. without limit ಕೊನೆಯಿಲ್ಲದೆ; ಮಿತಿಯಿಲ್ಲದೆ; ನಿರ್ಬಂಧವಿಲ್ಲದೆ; ಯಾವುದೇ ರೀತಿಯ ಬಂಧನಗಳಿಲ್ಲದೆ.
See also 1limit
2limit ಲಿಮಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ limited, ವರ್ತಮಾನ ಕೃದಂತ limiting).
  1. ಎಲ್ಲೆಯಾಗಿರು; ಗಡಿಯಾಗಿರು; ಸೀಮೆಯಾಗಿರು; ಮೇರೆಯಾಗಿರು.
  2. ಎಲ್ಲೆ ಹಾಕು; ಮೇರೆ ಹಾಕು; ಗಡಿ ಕಲ್ಪಿಸು.
  3. ಸೀಮಿತಗೊಳಿಸು; ಹದ್ದಿನಲ್ಲಿಡು; ಮಿತಿಯಲ್ಲಿಡು; ಮಿತಿ ಹಾಕು; ಮಿತಿ ಕಲ್ಪಿಸು: (–ಕ್ಕೆ) ಮಿತಗೊಳಿಸು.
ಪದಗುಚ್ಛ
  1. limited mail ಸೀಮಿತ ಅಂಚೆ ರೈಲು; ಕ್ಲುಪ್ತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಒಯ್ಯುವ ಅಂಚೆ ರೈಲು.
  2. limited monarchy (ರಾಜ್ಯಾಂಗದ ಕಟ್ಟುಗಳಿಗೆ ಒಳಪಟ್ಟಿರುವ) ಸಾಂಕುಶ ರಾಜ ಪ್ರಭುತ್ವ.