See also 2lily
1lily ಲಿಲಿ
ನಾಮವಾಚಕ
(ಬಹುವಚನ lilies).
  1. ಲಿಲಿ ಗಿಡ; ನೆಲನೈದಿಲೆ; ಸ್ಥಲಕುವಲಯ; ಉದ್ದನೆಯ ತೆಳುವಾದ ದಂಟಿನ ತುದಿಯಲ್ಲಿ ಬಿಳಿಯ ಯಾ ಕೆಂಪು ಛಾಯೆಯ ಯಾ ನಸುಕೆನ್ನೀಲಿಯ, ಕೆಲವೊಮ್ಮೆ ಚುಕ್ಕೆಗಳಿರುವ ತುತ್ತೂರಿಯಾಕಾರದ ದೊಡ್ಡ ಹೂಗಳನ್ನು ಬಿಡುವ, ಲಿಲಿಯಮ್‍ ಕುಲಕ್ಕೆ ಸೇರಿದ, ಗೆಡ್ಡೆ ಬೇರಿನ ಯಾವುದೇ ಗಿಡ, ಉದಾಹರಣೆಗೆ ಮಡೋನಾ ಲಿಲಿ, ಟೈಗರ್‍ಲಿಲಿ.
  2. ಲಿಲಿ; ಅದೇ ರೀತಿಯ ಹೂಗಳನ್ನು ಬಿಡುವ, ಲಿಲಿಯೇಸೀ ವಂಶಕ್ಕೆ ಸೇರಿದ, ಇತರ ಹಲವಾರು ಗಿಡಗಳಲ್ಲೊಂದು, ಉದಾಹರಣೆಗೆ ಆಹ್ರಿಕದ ಲಿಲಿ ಗಿಡ.
  3. ನೀರು ಲಿಲಿ; ಜಲನೈದಿಲೆ.
  4. ಅಚ್ಚ ಬಿಳುಪಿನ ಯಾ ಪರಿಶುದ್ಧ ಗುಣದ – ವ್ಯಕ್ತಿ ಯಾ ವಸ್ತು.
  5. ವಂಶಲಾಂಛನಗಳಲ್ಲಿ ಚಿತ್ರಿಸಿರುವ – ಲಿಲಿ, ನೈದಿಲೆ.
ಪದಗುಚ್ಛ
  1. lilies and roses ಸುಂದರ ದೇಹಕಾಂತಿ; ಗೌರವರ್ಣ.
  2. lily of the valley (ಎರಡು ದೊಡ್ಡ ಜೊತೆ ಎಲೆಗಳೂ ಸುವಾಸನೆಯುಳ್ಳ ಗಂಟೆಯಾಕಾರದ ಹೂವುಗಳೂ ಉಳ್ಳ) ವಸಂತ – ಸಸ್ಯ, ಪುಷ್ಪ.
  3. the lilies ನೈದಿಲೆ; ಹಿಂದಿನ ಹ್ರೆಂಚ್‍ ರಾಜವಂಶದ ಬಿರುದಿನ ಲಾಂಛನ; (ಹ್ರಾನ್ಸಿನ) ಬೊರ್ಬನ್‍ (ರಾಜ)ವಂಶ.
ನುಡಿಗಟ್ಟು

gild (or paint) the lily ಈಗಾಗಲೇ ತೃಪ್ತಿಕರವಾಗಿರುವುದನ್ನು ಉತ್ತಮಗೊಳಿಸಲು ಹೋಗು, ಪ್ರಯತ್ನಿಸು; ಗುಲಾಬಿಗೆ ಬಣ್ಣ ಹಚ್ಚು, ಹಾಕು.

See also 1lily
2lily ಲಿಲಿ
ಗುಣವಾಚಕ

(ವಿಶೇಷಣವಾಗಿ)

  1. ಮಂದ ಶ್ವೇತ; ಎಳೆಬಿಳುಪಿನ; ಲಲಿತವಾದ ಬಿಳುಪಿನ: a lily hand ಎಳೆ ಬಿಳುಪಿನ ಕೈ.
  2. ಬಿಳಿಚಿಕೊಂಡಿರುವ; ವಿವರ್ಣವಾದ.