liken ಲೈಕನ್‍
ಸಕರ್ಮಕ ಕ್ರಿಯಾಪದ
  1. (ಒಬ್ಬ ವ್ಯಕ್ತಿ ಯಾ ವಸ್ತುವನ್ನು ಇನ್ನೊಬ್ಬನೊಡನೆ ಯಾ ಇನ್ನೊಂದರೊಡನೆ ಹೋಲಿಸಿ) ಹೋಲಿಕೆ ಕಂಡುಹಿಡಿ; ಸಾದೃಶ್ಯ ತೋರಿಸು; ಹೋಲಿಸು: to liken him to a tiger ಅವನನ್ನು ಹುಲಿಗೆ ಹೋಲಿಸುವುದು.
  2. (ವಿರಳ ಪ್ರಯೋಗ) – ಅಂತೆ ಮಾಡು; ಸದೃಶವಾಗಿ ಮಾಡು; ಸರಿಸಮವಾಗಿಸು; ಸರಿಸಮಾನವಾಗಿಸು: its arbitrary character likens it to a despotism ಅದರ ಸ್ವೇಚ್ಛಾವರ್ತಕ ಗುಣದಿಂದಾಗಿ ಅದು ನಿರಂಕುಶತ್ವಕ್ಕೆ ಸರಿಸಮವಾಗಿರುತ್ತದೆ.