lignify ಲಿಗ್ನಿಹೈ
ಕ್ರಿಯಾಪದ

(ವರ್ತಮಾನಕಾಲ ಪ್ರಥಮ ಪುರುಷ ಏಕವಚನ lignifies, ಭೂತರೂಪ lignified).

ಸಕರ್ಮಕ ಕ್ರಿಯಾಪದ

(ಸಸ್ಯವಿಜ್ಞಾನ) ಕಾಷ್ಠೀಕರಿಸು; ಸಸ್ಯದ ಜೀವಕೋಶ ಭಿತ್ತಿಯಲ್ಲಿ ಭೌತ ಮತ್ತು ರಾಸಾಯನಿಕ ಬದಲಾವಣೆಗಳನ್ನುಂಟುಮಾಡಿ ಅದನ್ನು ಲಿಗ್ನಿನ್‍ ಯಾ ಲಿಗ್ನೊಸೆಲ್ಯುಲೋಸ್‍ ಆಗಿ ಪರಿವರ್ತಿಸುವ ಮೂಲಕ ದಾರುವಾಗಿ, ಮರವಾಗಿ – ಮಾಡು, ಕಟ್ಟಿಗೆಯಾಗಿಸು.

ಅಕರ್ಮಕ ಕ್ರಿಯಾಪದ

ಕಾಷ್ಠೀಭವಿಸು; ಲಿಗ್ನಿನ್‍ ಯಾ ಲಿಗ್ನೊಸೆಲ್ಯುಲೋಸ್‍ ಸಂಚಯವಾಗುವುದರಿಂದ ದಾರುವಾಗು, ಕಟ್ಟಿಗೆಯಾಗು.