lightly ಲೈಟ್‍ಲಿ
ಕ್ರಿಯಾವಿಶೇಷಣ
  1. ಲಘುವಾಗಿ; ಹಗುರವಾಗಿ; ಭಾರವಿಲ್ಲದೆ; ಹೊರೆಯಿಲ್ಲದೆ.
  2. ಮೃದುವಾಗಿ; ಸೂಕ್ಷ್ಮವಾಗಿ; ಎಚ್ಚರಿಕೆಯಿಂದ: lightly fried eggs ಬಲು ಸೂಕ್ಷ್ಮವಾಗಿ ಕರಿದ ಮೊಟ್ಟೆಗಳು.
  3. ಸುಲಭವಾಗಿ; ಅನಾಯಾಸವಾಗಿ.
  4. ಹಗುರವಾಗಿ; ನಿರುದ್ವೇಗದಿಂದ; ದುಗುಡವಿಲ್ಲದೆ; ಚಿತ್ತಚಾಂಚಲ್ಯವಿಲ್ಲದೆ: to take bad news lightly ಕೆಟ್ಟ ಸುದ್ದಿಯನ್ನು ನಿರುದ್ವೇಗದಿಂದ ಸ್ವೀಕರಿಸು.
  5. ಬಾಲಿಶವಾಗಿ; ಹುಡುಗಾಟಿಕೆಯಿಂದ: behave lightly ಬಾಲಿಶವಾಗಿ ವರ್ತಿಸು.
  6. (ನಿಷೇಧಾರ್ಥಕವಾಗಿ) ಲಘುವಾಗಿ; ವಿಚಾರಮಾಡದೆ; ದುಡುಕಿನಿಂದ; ಹಿಂದುಮುಂದು ನೋಡದೆ: an offer not to be refused lightly ಲಘುವಾಗಿ ತಿರಸ್ಕರಿಸುವಂಥ ಕೊಡುಗೆಯಲ್ಲ.
  7. ಚುರುಕಾಗಿ; ವೇಗವಾಗಿ.
  8. ಕಡೆಗಣಿಸುವಂತೆ; ತಾತ್ಸಾರದಿಂದ; ಉದಾಸೀನವಾಗಿ; ಲಘುವಾಗಿ: to think lightly of one’s achievements ಒಬ್ಬನ ಸಾಧನೆಗಳನ್ನು ತಾತ್ಸಾರದಿಂದ ನೋಡುವುದು.
  9. ಗೆಲುವಾಗಿ; ನಲಿವಿನಿಂದ; ಸಂಭ್ರಮದಿಂದ: flags floating lightly ಬಾವುಟಗಳು ಸಂಭ್ರಮದಿಂದ ಹಾರುತ್ತ.
ನುಡಿಗಟ್ಟು

get off lightly ಅಲ್ಪಸ್ವಲ್ಪ ಶಿಕ್ಷೆಯಿಂದ ಯಾ ಶಿಕ್ಷೆಯೇ ಇಲ್ಲದೆ ಬಚಾಯಿಸಿಕೊ.