See also 2lighten
1lighten ಲೈಟ್‍(ಟ್‍)ನ್‍
ಸಕರ್ಮಕ ಕ್ರಿಯಾಪದ
  1. (ಹಡಗು ಮೊದಲಾದವುಗಳ) ಹೊರೆತಗ್ಗಿಸು; ಭಾರವಿಳಿಸು; ಭಾರ ತಗ್ಗಿಸು, ಕಡಮೆಮಾಡು.
  2. ಹಗುರಗೊಳಿಸು; ತೂಕವಿಳಿಸು; ತೂಕ ಕಡಮೆ ಮಾಡು.
  3. (ಹೃದಯ, ಮನಸ್ಸು, ಮೊದಲಾದವನ್ನು) ಹಗುರ ಮಾಡು; ಉಪಶಮನಮಾಡು; ಸಮಾಧಾನ ಮಾಡು; (ಮನಸ್ಸು ಮೊದಲಾದವುಗಳ) ಚಿಂತಾಭಾರವಿಳಿಸು; ಹೊರೆಯಿಳಿಸು.
  4. (ಶಿಕ್ಷೆ ಯಾ ದಂಡವನ್ನು) ತಗ್ಗಿಸು; ಕಡಮೆ ಮಾಡು.
ಅಕರ್ಮಕ ಕ್ರಿಯಾಪದ
  1. ಹಗುರವಾಗು; ತೂಕ ಕಡಮೆಯಾಗು; ಲಘುವಾಗು; ಭಾರವಿಳಿ.
  2. (ಮನಸ್ಸು ಮೊದಲಾದವುಗಳ ವಿಷಯದಲ್ಲಿ) ಭಾರವಿಳಿ; ಹಗುರವಾಗು; ಲಘುವಾಗು; ಉಪಶಮನವಾಗು.
  3. ತಗ್ಗು; ಕಡಮೆಯಾಗು: the rain seemed to lighten ಮಳೆ ಕಡಮೆಯಾಗುವಂತೆ ಕಂಡು ಬಂತು.
See also 1lighten
2lighten ಲೈಟ್‍(ಟ್‍)ನ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತು ಮೊದಲಾದವುಗಳ ಮೇಲೆ) ಬೆಳಕು – ಹಾಯಿಸು, ಹರಿಸು, ಚೆಲ್ಲು; ಬೆಳಗು: lighten our darkness ನಮ್ಮ ಕತ್ತಲಿಗೆ ಬೆಳಕು ನೀಡು.
  2. ಬೆಳಗಿಸು; ಪ್ರಕಾಶಮಾನವಾಗಿಸು; ಉಜ್ವಲವಾಗಿ ಮಾಡು.
ಅಕರ್ಮಕ ಕ್ರಿಯಾಪದ
  1. (ಮುಖ, ಕಣ್ಣು, ಆಕಾಶ, ಮೊದಲಾದವುಗಳ ವಿಷಯದಲ್ಲಿ) ಪ್ರಕಾಶವಾಗು; ಬೆಳಗು; ಹೊಳೆ.
  2. ಪ್ರಕಾಶಮಾನವಾಗು; ಉಜ್ವಲವಾಗು.
  3. (ಆಕಾಶ, ಮೋಡ, ಮೊದಲಾದವುಗಳ ವಿಷಯದಲ್ಲಿ) ಮಿಂಚು; ಮಿಂಚು – ಹೊಳೆ, ಹೊಮ್ಮು: the sky thundered and lightened for hours ಆಕಾಶವು ಗಂಟೆಗಟ್ಟಲೆ ಗುಡುಗಿತು, ಮಿಂಚಿತು. it is lightening ಮಿಂಚುತ್ತಿದೆ.