ligature ಲಿಗಚರ್‍
ನಾಮವಾಚಕ
  1. (ಮುಖ್ಯವಾಗಿ ಶಸ್ತ್ರವೈದ್ಯ) ಕಟ್ಟು – ಪಟ್ಟಿ, ದಾರ; ಬಂಧಕರಜ್ಜು; ರಕ್ತಸ್ರಾವವಾಗುತ್ತಿರುವ ನಾಳವನ್ನು ಕಟ್ಟಲು, ಗಂತಿಗಳನ್ನು ಬಿಗಿಯಲು, ಮೊದಲಾದವುಗಳಿಗಾಗಿ ಬಳಸುವ ಪಟ್ಟಿ ಯಾ ದಾರ.
  2. (ಸಂಗೀತ) ಕೂಡುಗೆರೆ; ಸಂಯೋಗ ರೇಖೆ; ಒಟ್ಟಿಗೆ ನುಡಿಸಬೇಕೆಂಬ ಎರಡು ಸ್ವರಗಳ ಮೇಲೆ ಹಾಕಿರುವ ಕೂಡುಗೆರೆ.
  3. (ಮುದ್ರಣ) ಕೂಡಕ್ಷರ; ಸಂಯುಕ್ತಾಕ್ಷರ; ಒಂದೇ ಮೊಳೆಯಲ್ಲಿ ಒಟ್ಟುಗೂಡಿದ ಎರಡು ಯಾ ಹೆಚ್ಚು ಅಕ್ಷರಗಳು, ಉದಾಹರಣೆಗೆ ${\rm æ}.$
  4. ಕಟ್ಟು; ಬಂಧನಿ; ಸಂಯೋಜಿಸುವ ವಸ್ತು.
  5. ಕಟ್ಟುವುದು; ಬಂಧನ; ಒಟ್ಟುಗೂಡಿಸುವುದು.