lifeless ಲೈಹ್‍ಲಿಸ್‍
ಗುಣವಾಚಕ
  1. ಜೀವರಹಿತ; ಪ್ರಾಣವಿಲ್ಲದ; ಸತ್ತ; ಮೃತ; ಪ್ರಾಣ ಹೋದ: lifeless bodies of slaughtered animals ಕೊಂದ ಪ್ರಾಣಿಗಳ ಸತ್ತ ದೇಹಗಳು.
  2. ಜಡ; ನಿರ್ಜೀವ; ಜೀವವಿಲ್ಲದ; ಅಜೀವ; ಎಂದಿಗೂ ಜೀವವಿರದಿದ್ದ: as lifeless as marble ಅಮೃತ ಶಿಲೆಯಂತೆ ನಿರ್ಜೀವ.
  3. ಪ್ರಜ್ಞೆಯಿಲ್ಲದ; ಅರಿವಿಲ್ಲದ; ಜ್ಞಾನವಿಲ್ಲದ; ಸಂವೇದನೆಯಿಲ್ಲದ.
  4. ನಿಸ್ತೇಜ; ಕಳೆಗುಂದಿದ; ನಿಸ್ಸತ್ತ್ವ; ನೀರಸ; ಪೇಲವ: a lifeless speech ನಿಸ್ತೇಜ ಭಾಷಣ. a lifeless performance ನೀರಸ ಪ್ರದರ್ಶನ.
  5. ನಿರ್ಜನವಾದ; ಯಾವುದೇ ಜೀವಿ, ಜನ ಯಾ ಪ್ರಾಣಿ ಸಂಚಾರವಿಲ್ಲದ: the dark and lifeless plain ಕತ್ತಲು ಕವಿದ ನಿರ್ಜನ ಮೈದಾನ.
  6. ನಿರ್ಜೀವಿ; ಜೀವಿಗಳೇ ಇಲ್ಲದ: a lifeless planet ನಿರ್ಜೀವಿ ಗ್ರಹ.