lid ಲಿಡ್‍
ನಾಮವಾಚಕ
  1. (ಕಂಡಿಯನ್ನು, ಮುಖ್ಯವಾಗಿ ಪಾತ್ರೆಯ ಬಾಯಿಯನ್ನು ಮುಚ್ಚಲು ಬಳಸುವ, ಕೀಲಿ ಇರುವ ಯಾ ಬೇರ್ಪಡಿಸಬಹುದಾದ) ಮುಚ್ಚಳ; ಮುಚ್ಚಿಗೆ.
  2. = eye-lid.
  3. (ಜೀವವಿಜ್ಞಾನ) (ಕಪ್ಪೆಚಿಪ್ಪಿನ ಯಾ ಗಿಡದ) ಮುಚ್ಚಿಗೆ; ಪಿಧಾನ; ಮುಚ್ಚಳ ಯಾ ಅಂಥ ಯಾವುದೇ ಭಾಗ.
  4. (ಅಶಿಷ್ಟ) ಹ್ಯಾಟು; ಟೋಪಿ.
ನುಡಿಗಟ್ಟು
  1. put the lid (or tin lid) on (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ಮುಗಿಸು; ಕೊನೆಮುಟ್ಟಿಸು; ಸಮಾಪ್ತಿಗೊಳಿಸು; ಮುಕ್ತಾಯಕ್ಕೆ ತರು.
    2. ಶಿಖರವಾಗು; ಮೀರಿಸು; ಮೀರಿನಿಲ್ಲು; ಎಲ್ಲವನ್ನೂ ಮೆಟ್ಟಿನಿಲ್ಲು.
  2. take the lid off (ಆಡುಮಾತು) (ಕಳಂಕ ತರುವಂಥ ವಿಷಯ ಮೊದಲಾದವನ್ನು) ಹೊರಗೆಡಹು; ಬಯಲು ಮಾಡು.
  3. with the lid off (ಎಲ್ಲ ಭಯಂಕರ ದೃಶ್ಯಗಳು ಮೊದಲಾದವುಗಳ ವಿಷಯದಲ್ಲಿ) ಮರೆಕಳಚಿ; ಗೋಚರವಾಗಿ; ಪ್ರಕಟವಾಗಿ; ಕಣ್ಣಿಗೆ ತೆರೆದಿಟ್ಟು; ಎಲ್ಲವೂ ಕಾಣುವಂತೆ.