lichen ಲೈಕನ್‍, ಲಿಚನ್‍
ನಾಮವಾಚಕ
  1. (ಸಸ್ಯವಿಜ್ಞಾನ) ಕಲ್ಲುಹೂವು; ಲೈಕನ್‍; ಬಂಡೆಗಳು, ಮನೆಯ ಚಾವಣಿ, ಗೋಡೆಗಳು, ಮರಗಳ ಕಾಂಡಗಳು – ಇವುಗಳ ಮೇಲೆ ಬೆಳೆಯುವ ಶಿಲೀಂಧ್ರಗಳು (ಹಂಗಸ್‍ಗಳು) ಮತ್ತು ಪಾಚಿಗಳು (ಆಲ್ಗಗಳು) ಸೇರಿ ಆಗಿರುವ ಹಸಿರು, ಬೂದು ಯಾ ಹಳದಿ ಛಾಯೆಯ ಸಸ್ಯಜೀವಿ.
  2. (ವೈದ್ಯಶಾಸ್ತ್ರ) ಲೈಕನ್‍; ಕೆಂಪು ದದ್ದುಗಳಿಂದ ಕೂಡಿದ ಒಂದು ಚರ್ಮ ವ್ಯಾಧಿ.