library ಲೈಬ್ರರಿ
ನಾಮವಾಚಕ
(ಬಹುವಚನ libraries).
  1. ಗ್ರಂಥ ಸಂಗ್ರಹ; ಪುಸ್ತಕ ಸಂಗ್ರಹ; ಪುಸ್ತಕ ಭಂಡಾರ; ಗ್ರಂಥ ಭಂಡಾರ.
  2. (ವ್ಯಕ್ತಿಯ ಸ್ವಂತ) ಪುಸ್ತಕ ಸಂಗ್ರಹ; ಗ್ರಂಥ ಸಂಗ್ರಹ.
  3. ಗ್ರಂಥಾಲಯ; ಗ್ರಂಥಾಗಾರ:
    1. ಪುಸ್ತಕಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿ ಯಾ ಕಟ್ಟಡ (ಓದಲು ಯಾ ಪರಾಮರ್ಶನೆಗಾಗಿ ಇರುವುದು, ಮಾರಾಟಕ್ಕಲ್ಲ).
    2. ಹಿಲ್ಮ್‍ಗಳು, ದಾಖಲೆಗಳು, ಕಂಪ್ಯೂಟರ್‍ ರೊಟೀನ್‍ಗಳು, ಮೊದಲಾದವುಗಳ ಇಂಥದೇ ಸಂಗ್ರಹ.
    3. ಅವುಗಳನ್ನು ಇಟ್ಟಿರುವ ಸ್ಥಳ, ಕಟ್ಟಡ.
  4. ಸಾರ್ವಜನಿಕ – ಗ್ರಂಥಾಲಯ, ಪುಸ್ತಕ ಭಂಡಾರ; ಪುಸ್ತಕ, ಹಿಲ್ಮ್‍, ಮೊದಲಾದವುಗಳ ಸಂಗ್ರಹವನ್ನು ನೋಡಿಕೊಳ್ಳಲು ನಿಯುಕ್ತವಾದ ಸಾರ್ವಜನಿಕ ಸಂಸ್ಥೆ.
  5. ಗ್ರಂಥಮಾಲೆ; ಪುಸ್ತಕಮಾಲೆ; ಗ್ರಂಥಾವಳಿ; ಒಂದು ನಿರ್ದಿಷ್ಟ ತತ್ತ್ವದ ಆಧಾರದ ಮೇಲೆ, ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಪ್ರಕಟಿಸಿದ ಯಾ ಒಬ್ಬನೇ ಪ್ರಕಾಶಕನಿಂದ ಒಂದೇ ರೀತಿಯ ರಟ್ಟು ಮೊದಲಾದವುಗಳಲ್ಲಿ ಇರುವ ಏಕರೂಪದ ಮತ್ತು ಏಕಾಕಾರದ ಪುಸ್ತಕಗಳು: library of philosophy ತತ್ತ್ವಶಾಸ್ತ್ರದ ಗ್ರಂಥಮಾಲೆ.
  6. (ಮನೆಯಲ್ಲಿ ಸ್ವಂತ ಪುಸ್ತಕ ಸಂಗ್ರಹವನ್ನಿಟ್ಟಿರುವ, ಓದಲು, ಬರೆಯಲು ಬಳಸುವ) ಪುಸ್ತಕ ಕೊಠಡಿ; ಓದುವ ಕೋಣೆ.
ಪದಗುಚ್ಛ
  1. free library (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಪೌರಸಭೆಯ ತೆರಿಗೆ ವಸೂಲಿಯಿಂದ ನಡೆಯುವ, ಓದುಗರು ರುಸುಮು ಕೊಡುವ ಅಗತ್ಯವಿಲ್ಲದ) ಬಿಟ್ಟಿ ಪುಸ್ತಕ ಭಂಡಾರ; ಉಚಿತ ವಾಚನಾಲಯ; ಪುಕ್ಕಟ್ಟೆ ಪುಸ್ತಕ ಭಂಡಾರ; ಮುಹತ್ತು ಗ್ರಂಥ ಭಂಡಾರ.
  2. lending library ಎರವಲು – ಗ್ರಂಥಾಲಯ, ಪುಸ್ತಕ ಭಂಡಾರ; ರುಸುಮು ಕೊಟ್ಟೋ ಉಚಿತವಾಗಿಯೋ ಪುಸ್ತಕಗಳನ್ನು ಎರವಲಾಗಿ ಪಡೆಯಬಹುದಾದ ಪುಸ್ತಕಾಲಯ.
  3. public library ಸಾರ್ವಜನಿಕ ಪುಸ್ತಕಭಂಡಾರ (= free library).
  4. reference library ಪರಾಮರ್ಶನ ಪುಸ್ತಕ ಭಂಡಾರ; (ಅಲ್ಲಿಯೇ ಅವಲೋಕಿಸಿ ವಿಷಯ ಸಂಗ್ರಹಿಸಲು ಅನುಕೂಲಿಸುವಂತೆ ಶಾಸ್ತ್ರೀಯ ಇಲ್ಲವೆ ಪಾರಿಭಾಷಿಕ ಗ್ರಂಥಗಳು, ಕೋಶಗಳು, ಮೊದಲಾದವನ್ನು ಒಳಗೊಂಡ) ಅವಲೋಕನ ಗ್ರಂಥಾಲಯ.
  5. walking library ಜೀವಂತ ಪುಸ್ತಕ ಭಂಡಾರ; ಸಜೀವ ಗ್ರಂಥಾಲಯ; ವಿದ್ಯಾನಿಧಿ; ಅನೇಕ ಶಾಸ್ತ್ರಾದಿಗಳ ಗ್ರಂಥಗಳನ್ನು ಹೃದ್ಗತ ಮಾಡಿಕೊಂಡಿರುವ ಉದ್ದಾಮ ಪಂಡಿತ.