liberty ಲಿಬರ್ಟಿ
ನಾಮವಾಚಕ
  1. ಸ್ವಾತಂತ್ರ್ಯ:
    1. ಸೆರೆ, ಸೆರೆಮನೆವಾಸ, ಗುಲಾಮಗಿರಿ ಯಾ ಬೇರೊಬ್ಬರ ನಿರಂಕುಶ ಹತೋಟಿಗಳಿಂದ – ಬಿಡುಗಡೆ, ವಿಮೋಚನೆ, ವಿಮುಕ್ತಿ.
    2. ಸ್ವಾತಂತ್ರ್ಯಮೂರ್ತಿ; ಸ್ವಾತಂತ್ರ್ಯದ ಮೂರ್ತರೂಪ; ಜೀವಂತ ವ್ಯಕ್ತಿಯಾಗಿ ಸ್ವಾತಂತ್ರ್ಯದ ಕಲ್ಪನೆ.
    3. ಕ್ರಿಯಾ ಸ್ವಾತಂತ್ರ್ಯ; ಇಷ್ಟಬಂದಂತೆ ವರ್ತಿಸುವ ಯಾ ಮಾಡುವ ಸ್ವಾತಂತ್ರ್ಯ, ಹಕ್ಕು, ಅಧಿಕಾರ.
    4. ಹಕ್ಕು; ಅಧಿಕಾರ; ಅವಕಾಶ; ಅನುಮತಿ; ನಿಯಮ, ಕಟ್ಟುಪಾಡುಗಳಿಂದ ವಿನಾಯಿತಿ.
    5. (ತತ್ತ್ವಶಾಸ್ತ್ರ) (ವಿಧಿ, ದೈವಸಂಕಲ್ಪ, ಕರ್ಮ ನಿಯಮಗಳ ಹಿಡಿತಕ್ಕೆ ಒಳಪಡದ ಜೀವರುಗಳ) ಸಂಕಲ್ಪ ಸ್ವಾತಂತ್ರ್ಯ; ಇಚ್ಛಾಸ್ವಾತಂತ್ರ್ಯ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಅನುಭೋಗ, ಸನ್ನದು, ಮೊದಲಾದವುಗಳಿಂದ ಬಂದಿರುವ) ವಿಶೇಷ ರಿಯಾಯತಿ, ಸವಲತ್ತು, ಹಕ್ಕು, ಸೌಲಭ್ಯ ಯಾ ಅಧಿಕಾರ.
  3. (ಏಕವಚನ ಯಾ ಬಹುವಚನ) (ಚರಿತ್ರೆ) ಸ್ವತಂತ್ರ ಪ್ರದೇಶ:
    1. (ಅನುಭೋಗ, ಸನ್ನದು, ಮೊದಲಾದವುಗಳ ಮೂಲಕ ಪಡೆದ) ವಿಶೇಷ ಸವಲತ್ತುಗಳು ಮೊದಲಾದವುಗಳುಳ್ಳ, ಮುಖ್ಯವಾಗಿ ನಗರದ ಎಲ್ಲೆಯ ಆಚೆ ಇದ್ದರೂ ನಗರದ ನಿಯಂತ್ರಣಕ್ಕೆ ಒಳಪಟ್ಟ ಪ್ರದೇಶ.
    2. ಸೆರೆಮನೆಯ ಹೊರಗೆ ಇರುವ, ಕೆಲವು ಖೈದಿಗಳು ವಾಸ ಮಾಡಬಹುದಾದ ಪ್ರದೇಶ.
  4. ಸ್ವತಂತ್ರಪ್ರವೃತ್ತಿ; ಸ್ವೇಚ್ಛಾಚಾರ; ಸ್ವೇಚ್ಛಾ ಪ್ರವೃತ್ತಿ; ಸ್ವಚ್ಛಂದ ಪ್ರವೃತ್ತಿ; ಸ್ವಚ್ಛಂದ ವೃತ್ತಿ; ಸಂಪ್ರದಾಯ ಯಾ ನಿಯಮಗಳನ್ನು ಲೆಕ್ಕಿಸದೆ ಮನಬಂದಂತೆ ನಡೆಯುವುದು.
ಪದಗುಚ್ಛ
  1. at liberty
    1. (ಮಾಡಲು) ಸ್ವತಂತ್ರನಾಗಿ; ಹಕ್ಕುಳ್ಳವನಾಗಿ; ಅಧಿಕಾರಿಯಾಗಿ; ಅನುಮತಿ ಹೊಂದಿ.
    2. ಸ್ವತಂತ್ರನಾಗಿ; ಬಿಡುಗಡೆ ಪಡೆದು; ಸೆರೆಯಲ್ಲಿಲ್ಲದೆ: set at liberty ಬಿಡುಗಡೆ ಮಾಡು; ವಿಮೋಚಿಸು; ಸ್ವತಂತ್ರಗೊಳಿಸು; ವಿಮುಕ್ತಿಗೊಳಿಸು.
    3. ಲಭ್ಯವಾಗಿ; ಬಿಡುವಾಗಿ; ಅವಕಾಶವುಳ್ಳವನಾಗಿ; ವಿರಾಮ ಹೊಂದಿ.
  2. liberty of conscience
    1. ಆತ್ಮಸಾಕ್ಷಿ ಸ್ವಾತಂತ್ರ್ಯ; ಮನಸ್ಸಾಕ್ಷಿಗನುಗುಣವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ.
    2. (ಮುಖ್ಯವಾಗಿ) ಧಾರ್ಮಿಕ ಸ್ವಾತಂತ್ರ್ಯ; ಮನಸ್ಸಾಕ್ಷಿಗೊಪ್ಪುವ ಧರ್ಮದಲ್ಲಿ ಶ್ರದ್ಧೆಯಿಡುವ, ಅಂಥ ಧರ್ಮವನ್ನಪ್ಪುವ ಸ್ವಾತಂತ್ರ್ಯ.
  3. liberty of the press ಪತ್ರಿಕಾ, ಪ್ರಕಟನ – ಸ್ವಾತಂತ್ರ್ಯ; ಮಾನನಷ್ಟಕ್ಕಾಗಿ ಯಾ ತಕ್ಸೀರು ಬರಹಗಳಿಗಾಗಿ ಶಿಕ್ಷೆಗಳನ್ನು ಅನುಭವಿಸಲು ಬದ್ಧನಾಗಿ, ಸರ್ಕಾರದ ಪೂರ್ವಭಾವಿ ಅನುಮತಿಯಿಲ್ಲದೆ ತನಗೆ ಬೇಕಾದುದನ್ನು ಅಚ್ಚು ಹಾಕಿ ಪ್ರಕಾಶಪಡಿಸುವ ಸ್ವಾತಂತ್ರ್ಯ.
  4. liberty of the subject ಪ್ರಜಾ ಸ್ವಾತಂತ್ರ್ಯ; ಸಂವಿಧಾನಬದ್ಧ ಆಳ್ವಿಕೆಯಲ್ಲಿ ಪ್ರಜೆಗೆ ಇರುವ ಹಕ್ಕುಗಳು.
  5. natural liberty ಸ್ವಾಭಾವಿಕ, ಸಹಜ, ನೈಜ – ಸ್ವಾತಂತ್ರ್ಯ; ಕಾಯಿದೆ ಕಟ್ಟಳೆಗಳೇ ಇಲ್ಲದ ಸ್ಥಿತಿ.
ನುಡಿಗಟ್ಟು
  1. take the liberty to do (or of doing) (ಯಾವುದೇ ಕೆಲಸವನ್ನು) ಮಾಡುವ ಸ್ವಾತಂತ್ರ್ಯವಹಿಸು, ತೆಗೆದುಕೊ.
  2. take liberties with
    1. (ವ್ಯಕ್ತಿಗಳೊಡನೆ ಅನುಚಿತ ಯಾ ತಗದ ಸಲಿಗೆಯಿಂದ – ವರ್ತಿಸು, ನಡೆದುಕೊ.)
    2. (ನಿಯಮಗಳು, ಸತ್ಯಾಂಶಗಳು, ಮೊದಲಾದವುಗಳನ್ನು) ಮನಬಂದಂತೆ – ಬಳಸು, ಬದಲಾಯಿಸು; ಉಚಿತ ರೀತಿಯಲ್ಲಿ ಅಲ್ಲದೆ ಬಳಸುವ ಸ್ವಾತಂತ್ರ್ಯ ವಹಿಸು.