liberate ಲಿಬರೇಟ್‍
ಸಕರ್ಮಕ ಕ್ರಿಯಾಪದ
  1. ಬಿಡುಗಡೆಮಾಡು; ಬಿಡುಗಡೆಗೊಳಿಸು; ಸೆರೆತಪ್ಪಿಸು; ಬಂಧನದಿಂದ ಬಿಡಿಸು; ವಿಮುಕ್ತಗೊಳಿಸು; ವಿಮೋಚನೆಗೊಳಿಸು; ವಿಮೋಚಿಸು; ದಾಸ್ಯ ಮೊದಲಾದವುಗಳಿಂದ ಪಾರುಮಾಡು.
  2. (ದೇಶ ಮೊದಲಾದವನ್ನು ಆಕ್ರಮಣಕಾರಿಯಿಂದ ಯಾ ಶತ್ರುವಿನ ವಶದಿಂದ) ಬಿಡುಗಡೆ ಮಾಡು; ಸ್ವತಂತ್ರವಾಗಿಸು.
  3. (ವ್ಯಕ್ತಿಯನ್ನು, ಮುಖ್ಯವಾಗಿ ಲೈಂಗಿಕ ವ್ಯವಹಾರದಲ್ಲಿ, ಕಟ್ಟುನಿಟ್ಟಿನ ಸಾಮಾಜಿಕ ಸಂಪ್ರದಾಯಗಳಿಂದ) ಬಿಡುಗಡೆ ಮಾಡು; ಮುಕ್ತಗೊಳಿಸು; ಸ್ವತಂತ್ರವಾಗಿಸು.
  4. (ಅಶಿಷ್ಟ) ಕದಿ; ಅಪಹರಿಸು.
  5. (ರಸಾಯನವಿಜ್ಞಾನ) (ಮುಖ್ಯವಾಗಿ ಅನಿಲವನ್ನು ಸಂಯುಕ್ತ ಸ್ಥಿತಿಯಿಂದ ಯಾ ರಾಸಾಯನಿಕ ಸಂಯೋಗದಿಂದ) ಬಿಡುಗಡೆ ಮಾಡು; ವಿಮೋಚಿಸು.