liable ಲೈಅಬ್‍(ಬ)ಲ್‍
ಆಖ್ಯಾತಕ ಗುಣವಾಚಕ
  1. ಕಾನೂನು ಮೇರೆಗೆ ಬಾಧ್ಯನಾದ; ಕಾಯಿದೆ ಪ್ರಕಾರ – ಹೊಣೆಗಾರನಾದ, ಜವಾಬ್ದಾರನಾದ: liable for his wife’s debts ಅವನ ಹೆಂಡತಿಯ ಸಾಲಗಳಿಗೆ (ಕಾನೂನು ಪ್ರಕಾರ) ಜವಾಬ್ದಾರನಾದ.
  2. (ತೆರಿಗೆಗೆ ಯಾ ದಂಡಕ್ಕೆ) ಒಳಗಾದ; ಒಳಪಟ್ಟ; ಈಡಾದ; ಗುರಿಯಾದ: liable to fines upto Rs. 300/- ಮುನ್ನೂರು ರೂಪಾಯಿಗಳ ವರೆಗಿನ ದಂಡಕ್ಕೆ ಗುರಿಯಾದ.
  3. (ಮಾಡಲು) ಕರ್ತವ್ಯಬದ್ಧನಾದ.
  4. (ಯಾವುದೇ ಅನಿಷ್ಟಕ್ಕೆ) ಈಡಾಗುವ; ಪಕ್ಕಾಗುವ; ಗುರಿಯಾಗುವ; ಒಳಗಾಗಬಹುದಾದ: liable to make mistakes ತಪ್ಪುಗಳನ್ನು ಮಾಡಬಹುದಾದ.
  5. (ಯಾವುದಕ್ಕೇ) ಹೊಣೆಗಾರನಾದ; ಜವಾಬ್ದಾರನಾದ; ಉತ್ತರದಾಯಿಯಾದ: liable for the consequences ಪರಿಣಾಮಗಳಿಗೆ ಜವಾಬ್ದಾರನಾದ.
  6. (ವಿವಾದಾತ್ಮಕ ಪ್ರಯೋಗ) ಸಂಭವಿಸಬಹುದಾದ; ಸಂಭವವಿರುವ; ಸಂಭವನೀಯ: difficulties are liable to occur ಕಷ್ಟಗಳು ಸಂಭವಿಸಬಹುದು. it is liable to rain ಮಳೆಯಾಗುವ ಸಂಭವವಿದೆ.