leviathan ಲಿವೈಅತನ್‍
ನಾಮವಾಚಕ
  1. (ಬೈಬ್‍ಲ್‍) ಸಮುದ್ರದ ಪೆಡಂಭೂತ; ಭೂತಾಕಾರದ ಪ್ರಾಣಿ.
  2. (ಆಯಾ ವರ್ಗದ ವಸ್ತುಗಳಲ್ಲಿ) ದೈತ್ಯ ಕಾಯದ್ದು; ಅತಿ ದೊಡ್ಡದು; ಭಾರೀ ವಸ್ತು.
  3. (ಮುಖ್ಯವಾಗಿ) ಭಾರೀ ಹಡಗು; ಬೃಹನ್ನೌಕೆ.
  4. (ಇಂಗ್ಲಿಷ್‍ ಸಮಾಜ ವಿಜ್ಞಾನಿ ಹಾಬ್ಸನ ಕೃತಿಯಲ್ಲಿ ಸೂಚಿಸಿರುವಂತೆ) ನಿರಂಕುಶ – ಪ್ರಭು, ಪ್ರಭುತ್ವ ಯಾ ರಾಷ್ಟ್ರ.
  5. (ಶಕ್ತಿಯಲ್ಲಿ) ದೈತ್ಯ; ಭೀಮ; ಅತಿ – ಬಲಶಾಲಿ, ಸತ್ತ್ವಶಾಲಿ; ಭೀಮಬಲದವನು; ಅಗಾಧ ಸಾಮರ್ಥ್ಯವುಳ್ಳವನು.
  6. (ಅಧಿಕಾರದಲ್ಲಿ) ಅತ್ಯುಚ್ಚ; ಪರಮೋಚ್ಚ.
  7. (ಐಶ್ವರ್ಯದಲ್ಲಿ) ಕುಬೇರ; ಅತಿ ಸಿರಿವಂತ.