See also 2lever
1lever ಲೀವರ್‍
ನಾಮವಾಚಕ
  1. (ಭಾರವಾದ ಯಾ ಹೂತಿರುವ ವಸ್ತುವನ್ನು ಮೀಟಿ ಎತ್ತಲು ಬಳಸುವ) ಮೀಟುಗೋಲು; ಸನ್ನೆ; ಸನ್ನೆಕೋಲು. Figure: lever
  2. (ಯಂತ್ರಶಾಸ್ತ್ರ) ಸನ್ನೆ; ಮೀಟು – ಗೋಲು, ದಂಡ; ಭಾರವಾದ ವಸ್ತುವನ್ನು ಎತ್ತಲು ಯಾ ಸರಿಸಲು ಬಲ ಪ್ರಯೋಗಿಸಿ ಮೀಟುವ, ಆನಿಕೆಯೊಂದಕ್ಕೆ ಬಂಧಿಸಿರುವ ಗಡುಸಾದ, ಬಾಗದಿರುವ ಲೋಹದ ಮರ ಮೊದಲಾದವುಗಳ ಸರಳು, ಪಟ್ಟಿ ಯಾ ದಂಡ; “ಆನಿಕೆ” ಎಂಬ ಸ್ಥಿರ ಆಧಾರಭಾಗ, ಭಾರ ಮೀಟುವ ಎರಡನೆಯ ಭಾಗ ಮತ್ತು ಬಲಪ್ರಯೋಗಿಸುವ ಮೂರನೆಯ ಭಾಗ ಉಳ್ಳ, ಗಡುಸಾದ, ಬಾಗದ ಲೋಹದ ಸರಳು, ಪಟ್ಟಿ ಯಾ ದಂಡ.
  3. ಹಿಡಿ(ಕೆ); ಚಾಚು ಕೈ; ಯಾವುದೇ ಯಂತ್ರವನ್ನು ಚಾಲನೆ ಮಾಡುವ, ಚಾಚಿಕೊಂಡಿರುವ ಹಿಡಿ(ಕೆ).
  4. ಒತ್ತಾಯ; ಬಲಪ್ರಯೋಗ; ನೈತಿಕ ಒತ್ತಡ ಹೇರುವ ವಿಧಾನ.
  5. (ಬಂದೂಕಿನಲ್ಲಿ ಮದ್ದುಗುಂಡು ತುಂಬಲು ಕೋವಿಯನ್ನು ತೆರೆಯುವ) ಸನ್ನೆಕೀಲು.
  6. = lever watch.
ಪದಗುಚ್ಛ
  1. lever of first order ಮೊದಲನೆಯ ವರ್ಗದ ಸನ್ನೆ; ಆನಿಕೆಯ ಮೇಲಿರುವ ಸನ್ನೆಯ ಭಾಗ.
  2. lever of second order ಎರಡನೆಯ ವರ್ಗದ ಸನ್ನೆ; ಭಾರದ ಕೆಳಗಿರುವ ಸನ್ನೆ.
  3. lever of third order ಮೂರನೆಯ ವರ್ಗದ ಸನ್ನೆ; ಬಲಪ್ರಯೋಗಿಸುವ ಸ್ಥಾನದಲ್ಲಿನ ಸನ್ನೆ.
See also 1lever
2lever ಲೀವರ್‍
ಸಕರ್ಮಕ ಕ್ರಿಯಾಪದ

ಸನ್ನೆಯಿಂದ (ಯಾವುದನ್ನೋ)

  1. ಎತ್ತು.
  2. ಸರಿಸು.
  3. ಚಲನ ಮಾಡಿಸು; ಕೆಲಸ – ಮಾಡಿಸು, ನಡೆಸು.
ಅಕರ್ಮಕ ಕ್ರಿಯಾಪದ

ಸನ್ನೆಯನ್ನು ಬಳಸು; ಸನ್ನೆಯಿಂದ ಕೆಲಸ ಮಾಡು.