letterpress ಲೆಟರ್‍ಪ್ರೆಸ್‍
ನಾಮವಾಚಕ
  1. (ಪುಸ್ತಕದಲ್ಲಿನ) ಪಠ್ಯ, ವಾಚನ, ಓದುವ – ಭಾಗ; ಸಚಿತ್ರಗ್ರಂಥವೊಂದರಲ್ಲಿ ಮುದ್ರಿತಚಿತ್ರಗಳನ್ನು ಬಿಟ್ಟು ಉಳಿದ ಪಠ್ಯಭಾಗ. lively pencil sketches.... dodge in and out among the letterpress ಸುಂದರ ರೇಖಾಚಿತ್ರಗಳು ಪಠ್ಯಭಾಗದ ನಡುವೆ ನುಗ್ಗಿ ನುಸುಳಿ ಹಾಯ್ದು ಹೋಗುತ್ತವೆ.
  2. ಚಿತ್ರವಿಷಯ; ಚಿತ್ರಗಳಿಗೆ ಸಂಬಂಧಿಸಿದ ಮುದ್ರಿತ ವಿಷಯ.
  3. ಉಬ್ಬು ಮುದ್ರಣ; ಉಬ್ಬಚ್ಚು ಮುದ್ರಣ; ಉಬ್ಬಿದ ಅಚ್ಚುಗಳ ಮೇಲೆ ಮಸಿ ಸವರಿ ಅದನ್ನು ಕಾಗದದ ಮೇಲೆ ಒತ್ತಿ ಮಾಡುವ ಮುದ್ರಣ ಯಾ ಮುದ್ರಣ ವಿಧಾನ.
  4. ಉಬ್ಬಚ್ಚು ಯಂತ್ರ; ಉಬ್ಬಚ್ಚನ್ನು ಒತ್ತಿ ಮುದ್ರಿಸುವ ಯಂತ್ರ.