See also 2leopard
1leopard ಲೆಪರ್ಡ್‍
ನಾಮವಾಚಕ
  1. ಚಿರತೆ; ಚಿರ್ಚು; ಚೀತಾ; ಆಹ್ರಿಕ ಮತ್ತು ದಕ್ಷಿಣ ಏಷ್ಯಾಗಳಲ್ಲಿ ವಾಸಿಸುವ, ಕಪ್ಪು ಚರ್ಮದ ಯಾ ಕಂದು, ಕೆಂಚು, ಯಾ ಹಳದಿ ಬಣ್ಣದ ತೊಗಲಿನ ಮೇಲೆ ಕಪ್ಪು ಚುಕ್ಕೆಗಳುಳ್ಳ, ಪ್ಯಾಂತರ ಪಾರ್ಡಸ್‍ ಕುಲಕ್ಕೆ ಸೇರಿದ, ಬೆಕ್ಕಿನ ಬಳಗದ, ಒಂದು ದೊಡ್ಡ ಮಾಂಸಾಹಾರಿ ಪ್ರಾಣಿ. Figure: leopard 1
  2. (ವಂಶಲಾಂಛನ ವಿದ್ಯೆ) (ಇಂಗ್ಲೆಂಡಿನ ರಾಷ್ಟ್ರಲಾಂಛನಲ್ಲಿರುವಂಥ) ರಕ್ಷಕಸಿಂಹ.
ಪದಗುಚ್ಛ
  1. American leopard ಜಾಗ್ವಾರ್‍ ಚಿರತೆ; ಅಮೆರಿಕದ ಚಿರತೆ.
  2. black leopard ಕರಿ, ಕಪ್ಪು – (ತೊಗಲಿನ) ಚಿರತೆ.
  3. hunting leopard ಚೀತಾ; ಬೇಟೆಚಿರತೆ; ಬೇಟೆಗಾಗಿ ಪಳಗಿಸಿದ ಭಾರತದ ಚಿರತೆ.
  4. snow leopard ಹಿಮ(ಪ್ರದೇಶದ) ಚಿರತೆ.
ನುಡಿಗಟ್ಟು

can the leopard change his spots? ಹುಟ್ಟುಗುಣ ಸುಟ್ಟರೆ ಹೋದೀತೆ? ಹುಟ್ಟುಗುಣ ಸುಟ್ಟರೂ ಬಿಡದು; ಹುಟ್ಟುಗುಣ ಘಟ್ಟಹತ್ತಿದರೂ ಬಿಡದು; ಹುಟ್ಟಿದ ಸುಳಿ ಬೋಳಿಸಿದರೆ ಹೋಗುತ್ತದೆಯೇ?

See also 1leopard
2leopard ಲೆಪರ್ಡ್‍
ಗುಣವಾಚಕ

(ಪ್ರಾಣಿಗಳ ಹೆಸರುಗಳು ಮೊದಲಾದವುಗಳ ವಿಷಯದಲ್ಲಿ) ಚಿರತೆಯಂತೆ ಬೊಟ್ಟುಗಳುಳ್ಳ, ಮಚ್ಚೆಗಳುಳ್ಳ: leopard moth ಚಿರತೆ ಪತಂಗ.