lenient ಲೀನಿಅಂಟ್‍
ಗುಣವಾಚಕ
  1. ಸಹಿಷ್ಣು; ಸಹನಶೀಲ; ಸೈರಣೆಯುಳ್ಳ.
  2. ಮೃದುವಾದ; ದಯಾಪರ; ದಯದಾಕ್ಷಿಣ್ಯಗಳಿಂದ ಕೂಡಿದ; ನಿಷ್ಠುರವಾಗಿರದ.
  3. (ಶಿಕ್ಷೆ ಮೊದಲಾದವುಗಳ ವಿಷಯದಲ್ಲಿ) ಸೌಮ್ಯವಾದ; ಕಠಿಣವಲ್ಲದ; ಉಗ್ರವಲ್ಲದ; ಕಠೋರವಲ್ಲದ.
  4. (ಪ್ರಾಚೀನ ಪ್ರಯೋಗ) ಉಪಶಾಮಕ; ಮಿದುಗೊಳಿಸುವ; ಮೃದುಕಾರಿಯಾದ: lenient balm ಉಪಶಾಮಕ ಮುಲಾಮು.