lend ಲೆಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lent ಉಚ್ಚಾರಣೆ ಲೆಂಟ್‍).
  1. (ವ್ಯಕ್ತಿಯ ಬಳಕೆಗಾಗಿ ವಸ್ತುವನ್ನೋ ಅದರ ಸಮಾನ ಬೆಲೆಯನ್ನೋ ಹಿಂದಿರುಗಿಸುವ ಷರತ್ತಿನ ಮೇಲೆ) ಕಡ ಕೊಡು; ಎರವಲು ಕೊಡು.
  2. (ಹಣವನ್ನು) ಬಡ್ಡಿಗಾಗಿ – ಕಡ ಕೊಡು, ಸಾಲ ಕೊಡು.
  3. (ತಾತ್ಕಾಲಿಕವಾಗಿ ಯಾವುದೇ ವಸ್ತುವನ್ನು) ನೀಡು; ಕೊಡು; ಒದಗಿಸು: lend assistance ಸಹಾಯನೀಡು. lends a certain charm ಮೋಹಕತೆಯನ್ನು ಕೊಡುತ್ತದೆ.
  4. (ಪದಾರ್ಥ ಮೊದಲಾದವನ್ನು) ಎರವಲಾಗಿ, ಬಾಡಿಗೆಗಾಗಿ – ಕೊಡು.
  5. (ಯಾವುದೋ ಒಂದು ನೀತಿಗೆ ಯಾ ಉದ್ದೇಶಕ್ಕೆ) ಹೊಂದಿಕೊ; ಅನುಕೂಲಿಸು; ಒದಗು; ಒದಗಿ ಬರು; ಸಹಾಯಕವಾಗು; ನೆರವಾಗು; ಎಡೆಗೊಡು; ಅವಕಾಶನೀಡು: the word lends itself to misinterpretation ಆ ಪದ ಅಪವ್ಯಾಖ್ಯಾನಕ್ಕೆ ಅವಕಾಶ ನೀಡುತ್ತದೆ. ಎಡೆಗೊಡುತ್ತದೆ.
ನುಡಿಗಟ್ಟು
  1. lend a hand ಸಹಾಯಮಾಡು; ಕೈನೀಡು; ನೆರವಾಗು.
  2. lend a helping hand = ನುಡಿಗಟ್ಟು \((1)\).
  3. lend an (or one’s) ear ಕಿವಿಗೊಡು; ಕಿವಿಗೊಟ್ಟು ಕೇಳು; ಆಲಿಸು.
  4. lend itself to (ಒಂದು ವಸ್ತುವಿನ ವಿಷಯದಲ್ಲಿ) ಹೊಂದು; ತಕ್ಕಂತಿರು; ಅನುಕೂಲವಾಗಿರು; ಉಚಿತವಾಗಿರು: a novel lending itself to dramatization ನಾಟಕವಾಗಿ ಪರಿವರ್ತಿಸಲು ತಕ್ಕುದಾಗಿರುವ ಕಾದಂಬರಿ.
  5. lend oneself to (ಒಂದು ನೀತಿ ಯಾ ಉದ್ದೇಶಕ್ಕೆ) ತನ್ನನ್ನು ಸರಿಹೊಂದಿಸಿಕೊ.
  6. lend person a box on the ear (ಪ್ರಾಚೀನ ಪ್ರಯೋಗ) ಕಪಾಳಕ್ಕೆ (ಒಂದೇಟು) ಕೊಡು, ಹೊಡೆ.