leitmotif ಲೈಟ್‍ಮೋಟೀಹ್‍
ನಾಮವಾಚಕ
  1. (ಸಂಗೀತ) ಪ್ರಧಾನ ಸ್ವರಪುಂಜ; ಆವರ್ತಕ ಸ್ವರಗುಚ್ಛ; ಗೀತ ನಾಟಕಗಳಲ್ಲಿ ಯಾವುದಾದರೂ ನಿರ್ದಿಷ್ಟ ಪಾತ್ರದ, ಪರಿಸ್ಥಿತಿಯ ಯಾ ಭಾವದ ಜೊತೆಗೆ ಸಂಬಂಧಪಡೆದ, ಅವು ಬರುವಾಗಲೆಲ್ಲ ಶ್ರುತವಾಗುವ ಸ್ವರಪುಂಜ.
  2. ಮುಖ್ಯ ವಿಷಯ; ಪ್ರಧಾನೋದ್ದೇಶ; ಆವರ್ತಕ ವಿಷಯ; ಕೃತಿಯ, ಗ್ರಂಥದ ಉದ್ದಕ್ಕೂ ಪದೇಪದೇ ಆವರ್ತವಾಗುವ ವಿಷಯ, ಸಂಗತಿ, ಪದ, ಪದಗುಚ್ಛ, ಭಾವ ಯಾ ಭಾವನೆ: faith in art has been the leitmotif of his autobiography ಕಲೆಯಲ್ಲಿಯ ನಂಬಿಕೆಯೇ ಅವನ ಆತ್ಮಚರಿತ್ರೆಯ ಪ್ರಧಾನ ವಿಷಯವಾಗಿದೆ.