leeway ಲೀವೇ
ನಾಮವಾಚಕ
  1. ಮಗ್ಗಲು ಸರಿತ; ಅಡ್ಡಸರಿತ; ಸಾಗಬೇಕಾದ ಮಾರ್ಗದಿಂದ ಹಡಗು ತನ್ನ ಗಾಳಿಮರೆಯ ಕಡೆಗೆ ಅಡ್ಡಡ್ಡಲಾಗಿ ಸರಿಯುವುದು ಯಾ ಹಾಗೆ ಸರಿದ ಪ್ರಮಾಣ.
  2. ಸ್ವಲ್ಪ ಆಚೆಈಚೆ ಹೋಗಲು ಇರುವ ಅವಕಾಶ; ಕಾರ್ಯಸ್ವಾತಂತ್ರ್ಯ.
  3. (ಅಮೆರಿಕನ್‍ ಪ್ರಯೋಗ) ಸುರಕ್ಷಿತತೆಯ ಮಿತಿ, ಅವಕಾಶ.
ನುಡಿಗಟ್ಟು

make up leeway ಕೊರತೆಯಾದದ್ದನ್ನು, ಅರಕೆಯಾದದ್ದನ್ನು, ಕಳೆದುಹೋದದ್ದನ್ನು ಕೂಡಿಸಿಕೊಳ್ಳಲು ಪ್ರಯಾಸಪಡು; ದುಃಸ್ಥಿತಿಯಿಂದ ತಪ್ಪಿಸಿಕೊಳ್ಳಲು ಒದ್ದಾಡು: have much leeway to make up ಪರಿಸ್ಥಿತಿಯನ್ನು ಹದಗೊಳಿಸಿಕೊಳ್ಳಲು ಇನ್ನೂ ಮೊದ್ದಾಡುತ್ತಿರು; ಮಾಡಬೇಕಾದ ಕೆಲಸದಲ್ಲಿ ಹಿಂದೆ ಬಿದ್ದಿರು.