ledger ಲೆಜರ್‍
ನಾಮವಾಚಕ
  1. ಲೆಡ್ಜರು; ವರ್ಗ, ಖಾತೆ, ಕಿರ್ದಿ – ಪುಸ್ತಕ; ವ್ಯಾಪಾರದ ಲೇವಾದೇವಿ ಲೆಕ್ಕಗಳನ್ನು, ಸಂಗ್ರಹರೂಪದಲ್ಲಿ, ಸರಕು ಮತ್ತು ಗಿರಾಕಿಗಳ ಹೆಸರಿನಲ್ಲಿ ವರ್ಗೀಕರಿಸಿ ಬರೆದಿಡುವ, ಅಗಲ ಕಿರಿದಾಗಿಯೂ, ಉದ್ದ ಹೆಚ್ಚಾಗಿಯೂ ಇರುವ, ವ್ಯಾಪಾರದ ಮುಖ್ಯ ಲೆಕ್ಕದ ಪುಸ್ತಕ.
  2. ಗೋರಿಯ ಹಾಸುಗಲ್ಲು; ಸಮಾಧಿಯ ಚಪ್ಪಟೆ ಶಿಲೆ.
  3. (ಕಟ್ಟಡದ ಮುಖಕ್ಕೆ ಸಮಾನಾಂತರವಾಗಿರುವ) ಸಾರುವೆಯ ಅಡ್ಡಮರ.