See also 2leash
1leash ಲೀಷ್‍
ನಾಮವಾಚಕ
  1. (ಬೇಟೆಯ ಯಾ ಬೇಟೆಯಟ್ಟಿಕೊಂಡು ಹೋಗುವ ನಾಯಿಗಳನ್ನು ಹಿಡಿದಿರುವ) ತೊಗಲ – ಪಟ್ಟಿ, ಹಗ್ಗ, ಬಾರು.
  2. (ಬೇಟೆನಾಯಿ, ಮೊಲ, ಮೊದಲಾದವುಗಳ) ತ್ರಿಕ; ತ್ರಯ; ಮೂರರ ತಂಡ.
  3. (ನೇಯ್ಗೆ) ಬೆದ; ಹಾಸು ನೂಲೆಳೆಗಳನ್ನೆತ್ತುವ ಸಾಲುಕುಣಿಕೆ ಹುರಿಗಳಲ್ಲೊಂದು.
ನುಡಿಗಟ್ಟು
  1. hold in leash ಸ್ವಾಧೀನದಲ್ಲಿ, ಹತೋಟಿಯಲ್ಲಿ, ಹಿಡಿತದಲ್ಲಿ, ಅಂಕೆಯಲ್ಲಿ – ಇಟ್ಟುಕೊ; ನಿಯಂತ್ರಿಸು.
  2. straining at the leash ಆರಂಭಿಸಲು ಹಾತೊರೆಯುತ್ತಿರುವ; ಶುರುಮಾಡಲು ತವಕಿಸುತ್ತಿರುವ.
See also 1leash
2leash ಲೀಷ್‍
ಸಕರ್ಮಕ ಕ್ರಿಯಾಪದ
  1. (ತೊಗಲು ಬಾರಿನಿಂದ) ಒಟ್ಟಿಗೆ ಕಟ್ಟು; (ಕಟ್ಟಿ) ಹಿಡಿದುಕೊ.
  2. ತಡೆ; ನಿಗ್ರಹಿಸು.