learning ಲರ್ನಿಂಗ್‍
ನಾಮವಾಚಕ
  1. ಕಲಿಕೆ; ಶಿಕ್ಷಣ; ಅಭ್ಯಾಸ; ಒಂದು ಉದ್ಯೋಗ ಮೊದಲಾದವನ್ನು ಕಲಿಯುವಿಕೆ, ಅಭ್ಯಾಸ ಮಾಡುವಿಕೆ.
  2. (ಮುಖ್ಯವಾಗಿ ಭಾಷೆ, ಸಾಹಿತ್ಯ, ಚರಿತ್ರೆ, ಮೊದಲಾದವುಗಳ) ವ್ಯಾಸಂಗದಿಂದ ಪಡೆದ – ಜ್ಞಾನ, ಪಾಂಡಿತ್ಯ, ಪರಿಣತಿ, ವಿದ್ವತ್ತು, ಅರಿವು, ವಿದ್ಯೆ, ತಿಳಿವಳಿಕೆ: book learning ಪುಸ್ತಕ ಜ್ಞಾನ.
  3. (ಪರಂಪರೆಯಿಂದ ಬಂದ) ಜ್ಞಾನ; ಸಂಚಿತ ಜ್ಞಾನ: Assyrian learning of the past ಪುರಾತನ ಅಸಿರಿಯನರ ಜ್ಞಾನಸಂಚಯ.
ಪದಗುಚ್ಛ

the new learning ಹೊಸ – ಅರಿವು, ಅಧ್ಯಯನ, (ಮುಖ್ಯವಾಗಿ 16ನೆಯ ಶತಮಾನದ ಇಂಗ್ಲೆಂಡಿನಲ್ಲಿ ಪ್ರಾರಂಭವಾದ) ಗ್ರೀಕ್‍ ಅಧ್ಯಯನ.