learned ಲರ್ನಿಡ್‍
ಗುಣವಾಚಕ
  1. ಚೆನ್ನಾಗಿ – ಓದಿದ, ಕಲಿತ; ಬಲ್ಲಿದನಾದ; ವಿದ್ಯಾವಂತನಾದ; ಹೆಚ್ಚು ವ್ಯಾಸಂಗ ಮಾಡಿದ.
  2. ಪಾಂಡಿತ್ಯದ; ಪಾಂಡಿತ್ಯವುಳ್ಳ; ಪಾಂಡಿತ್ಯಪೂರ್ಣ; ಪಾಂಡಿತ್ಯ ತೋರುವ: a learned work ಪಾಂಡಿತ್ಯಪೂರ್ಣ ಕೃತಿ.
  3. (ಭಾಷೆ, ವೃತ್ತಿ, ಮೊದಲಾದವುಗಳ ವಿಷಯದಲ್ಲಿ) ಸುಶಿಕ್ಷಿತರು, ಪಂಡಿತರು – ಅವಲಂಬಿಸಿರುವ, ಅಭ್ಯಾಸ ಮಾಡುತ್ತಿರುವ; ಪಂಡಿತರ; ವಿದ್ವಾಂಸರ; ವಿದ್ಯಾವಂತರ: a learned society ವಿದ್ವಾಂಸರ ಸಂಘ.
  4. ವಿದ್ವತ್ಪೂರ್ಣವಾದ; ವಿದ್ವಾಂಸರ ಆಸಕ್ತಿಗಳಿಗೆ ಸಂಬಂಧಿಸಿದ: learned journal ವಿದ್ವತ್ಪತ್ರಿಕೆ.
  5. (ಭಾಷೆಯಲ್ಲಿನ ಪದಗಳ ವಿಷಯದಲ್ಲಿ) ಪಾಂಡಿತ್ಯಪೂರ್ಣವಾದ; ವಿದ್ವತ್ಸಹಜವಾದ; ಪಂಡಿತರಿಂದ (ಹೊಸದಾಗಿ) ಪ್ರಯೋಗಕ್ಕೆ ಬಂದ.
  6. (ಬ್ರಿಟಿಷ್‍ ಪ್ರಯೋಗ) (ನ್ಯಾಯವಾದಿ ಮೊದಲಾದವರನ್ನು ಗೌರವದಿಂದ ಕರೆಯುವಾಗ) ವಿದ್ವಾಂಸ; ವಿದ್ವನ್ಮಾನ್ಯ; ಪಂಡಿತನಾದ: my learned friend ನನ್ನ ವಿದ್ವನ್ಮಿತ್ರ, ಪಂಡಿತಮಿತ್ರ. my learned brother ನನ್ನ ವಿದ್ವಾಂಸ ಸೋದರ.