learn ಲರ್ನ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ learned ಉಚ್ಚಾರಣೆ ಲರ್ನ್ಡ್‍ ಯಾ learnt ಉಚ್ಚಾರಣೆ ಲರ್ನ್ಟ್‍).

ಸಕರ್ಮಕ ಕ್ರಿಯಾಪದ
  1. (ಒಂದು ವಿಷಯದಲ್ಲಿ, ಅಧ್ಯಯನ, ಅನುಭವ, ಮತ್ತೊಬ್ಬರಿಂದ ಕಲಿಕೆ, ಮೊದಲಾದವುಗಳ ಮೂಲಕ) ಕಲಿ; ಅಭ್ಯಾಸ, ಅಧ್ಯಯನ – ಮಾಡು; ಜ್ಞಾನ ಸಂಪಾದಿಸು.
  2. (ಕಲೆ ಮೊದಲಾದವುಗಳಲ್ಲಿ) ಚಾತುರ್ಯ ಪಡೆ; ಕೌಶಲ, ನೈಪುಣ್ಯ – ಸಂಪಾದಿಸು.
  3. ಒಂದು ನಿರ್ದಿಷ್ಟ ಸಾಮರ್ಥ್ಯವನ್ನು ಯಾ ಶಕ್ತಿಯನ್ನು – ಪಡೆದುಕೊ, ಗಳಿಸಿಕೊ, ಯಾ ಬೆಳೆಸಿಕೊ: learn to swim ಈಜುವ ಸಾಮರ್ಥ್ಯ ಬೆಳೆಸಿಕೊ.
  4. (ಬಾಯಿಗೆ) ಗಟ್ಟಿ ಮಾಡು; ಬಾಯಿಪಾಠ ಮಾಡು; ಕಂಠಸ್ಥವಾಗಿಸು: learn by heart ಉರು – ಹಚ್ಚು, ಹೊಡೆ; ಕಂಠಪಾಠವಾಗಿ, ಬಾಯಿಪಾಠವಾಗಿ – ಗಟ್ಟಿಮಾಡು.
  5. ಅರಿ; ತಿಳಿ; ಗ್ರಹಿಸು; ಒಬ್ಬರ ಹೇಳಿಕೆಯಿಂದ ಯಾ ಸ್ವಂತ ಪರಿಶೀಲನೆಯಿಂದ ಒಂದು ವಿಷಯವನ್ನು ತಿಳಿದುಕೊ.
  6. (ಪ್ರಾಚೀನ ಪ್ರಯೋಗ ಯಾ ಅಶಿಷ್ಟ) ಹೇಳಿಕೊಡು; ಕಲಿಸು; ಬೋಧಿಸು: I will learn him a thing or two ಬೇಕಾದರೆ ಒಂದೆರಡು ವಿಷಯಗಳನ್ನು ನಾನೇ ಅವನಿಗೆ ಹೇಳಿ ಕೊಡುತ್ತೇನೆ.
ಅಕರ್ಮಕ ಕ್ರಿಯಾಪದ
  1. ಕಲಿ; ಶಿಕ್ಷಣ ಪಡೆ; ತಿಳಿದುಕೊ; ಗ್ರಹಿಸು; ಜ್ಞಾನ ಯಾ ನೈಪುಣ್ಯ ಗಳಿಸು: learn rapidly ಬೇಗನೆ ಕಲಿ.
  2. (ಬೇರೆಯವರಿಂದ ಸುದ್ದಿ ಪಡೆದು ಯಾ ತಾನೇ ನೋಡಿ) ವಿಚಾರ ತಿಳಿ; ವಿಷಯ ಅರಿತುಕೊ: I am sorry to learn of (or about) your illness ನಿನ್ನ ಅನಾರೋಗ್ಯದ ವಿಷಯ ತಿಳಿದು ನನಗೆ ವ್ಯಥೆಯಾಗಿದೆ.
ಪದಗುಚ್ಛ
ನುಡಿಗಟ್ಟು
  1. I am (or have) yet to learn (ಸಾಮಾನ್ಯವಾಗಿ ಅಪನಂಬಿಕೆಯ ಸೂಚನೆಯೊಡನೆ) ನಾನಿನ್ನೂ ತಿಳಿದುಕೊಳ್ಳಬೇಕಾಗಿದೆ; ನನಗಿನ್ನೂ ಗೊತ್ತಿಲ್ಲ.
  2. learn one’s lesson.
  3. show somebody to learn the ropes (ಯಾವುದಾದರೂ ಒಂದನ್ನು ಮಾಡುವ) ವಿಧಾನಗಳನ್ನು ಯಾ ನಿಯಮಗಳನ್ನು ಒಬ್ಬನಿಗೆ ವಿವರಿಸು.
  4. we live and learn (ಹೊಸ ಯಾ ಅನಿರೀಕ್ಷಿತ ಸಮಾಚಾರ ಮೊದಲಾದವುಗಳ ಬಗ್ಗೆ ಆಶ್ಚರ್ಯ ಸೂಚಿಸಲು ಬಳಸುವ ಉದ್ಗಾರ) ನಾವು ಬದುಕಿದ್ದು ಕಲಿಯುತ್ತಿದ್ದೇವೆ.