See also 2leap
1leap ಲೀಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ leaped ಉಚ್ಚಾರಣೆ ಲೀಪ್ಟ್‍, ಯಾ

leapt (ಉಚ್ಚಾರಣೆ ಲೆಪ್ಟ್‍)).

ಸಕರ್ಮಕ ಕ್ರಿಯಾಪದ

ಹಾರಿಸು; ನೆಗೆ(ಯಿ)ಸು: leap a horse across a ditch ಕಂದಕದ ಆಚೆಗೆ ಕುದುರೆಯನ್ನು ನೆಗೆ(ಯಿ)ಸು.

ಅಕರ್ಮಕ ಕ್ರಿಯಾಪದ
  1. (ರಭಸದಿಂದ) ಜಿಗಿ; ಚಿಮ್ಮು; ಹಾರು; ನೆಗೆ; ಎಗರು; ಲಂಘಿಸು; ದುಮುಕು.
  2. (ಬೆಲೆಗಳು ಮೊದಲಾದವುಗಳ ವಿಷಯದಲ್ಲಿ) ಜಿಗಿ; ವಿಪರೀತವಾಗಿ ಏರು, ತೇಜಿಯಾಗು.
ನುಡಿಗಟ್ಟು
  1. leap to the eye ತಕ್ಷಣ ದೃಗ್ಗೋಚರವಾಗು; ಕೂಡಲೇ ಕಣ್ಣಿಗೆ – ಬಡಿ, ಬೀಳು, ಕಾಣಿಸು.
  2. look before you leap ನೋಡಿ ನುಗ್ಗು; ಆಳ ನೋಡಿ ನೀರಿಗಿಳಿ; ದುಡುಕಿ ಕಾರ್ಯ ಮಾಡಬೇಡ.
See also 1leap
2leap ಲೀಪ್‍
ನಾಮವಾಚಕ
  1. (ರಭಸದಿಂದ) ನೆಗೆತ; ಜಿಗಿತ; ಹಾರಿಕೆ; ಲಂಘನ; ಎಗರು; ಕುಪ್ಪಳಿಕೆ; ಎಗರಿಕೆ; ದುಮುಕುವಿಕೆ.
  2. ದಾಟುಜಾಗ; ಹಾರುದಾಣ; ಲಂಘ್ಯ, ಲಂಘನೀಯ, ಯಾ ಲಂಘಿತ – ದೂರ; ನೆಗೆದು ದಾಟಬೇಕಾದ ಯಾ ದಾಟಿದ ಯಾ ಎಲ್ಲಿಂದ ನೆಗೆಯುವೆವೋ ಆ ಸ್ಥಳ, ಜಾಗ, ದೂರ, ಮೊದಲಾದವು.
ನುಡಿಗಟ್ಟು
  1. advance by leaps and $^4$bounds. ರಭಸದಿಂದ – ಮುಂದುವರಿ, ಪ್ರಗತಿ ಪಡೆ; ಬೇಗ ಅಭಿವೃದ್ಧಿ ಹೊಂದು.
  2. leap in the $^2$dark. ಕತ್ತಲೆಯಲ್ಲಿ ನೆಗೆತ; ದುಡುಂ ಪ್ರವೇಶ; ದಿಢೀರ್‍ ಪ್ರವೇಶ; ಹಠಾತ್‍ ಪ್ರವೇಶ; ದುಡುಕು ಹೆಜ್ಜೆ; ಮುಂದಾಲೋಚನೆಯಿಲ್ಲದೆ, ಹುಚ್ಚುಧೈರ್ಯದಿಂದ ಕೈಗೊಂಡ ಕಾರ್ಯ.