See also 2lavender
1lavender ಲ್ಯಾವಿಂಡರ್‍
ನಾಮವಾಚಕ
  1. ಲ್ಯಾವಿಂಡರ್‍ (ಸಸ್ಯ): ಸುವಾಸನಾ ದ್ರವ್ಯಕ್ಕಾಗಿ ಬೆಳೆಯುವ, ನೀಲಿ, ನೇರಳೆ ಯಾ ಗುಲಾಬಿ ಬಣ್ಣದ ಸುಗಂಧಭರಿತ ಹೂಗಳನ್ನು ಬಿಡುವ, ಲವಂಡುಲ ಕುಲಕ್ಕೆ ಸೇರಿದ, ನಿತ್ಯಹರಿದ್ವರ್ಣದ ಹಲವಾರು ಚಿಕ್ಕಪೊದೆಗಳಲ್ಲಿ ಒಂದು.
  2. (ಬಟ್ಟೆ, ಲಿನನ್‍, ಮೊದಲಾದವುಗಳಿಗೆ ಹುಳು ತಿನ್ನದಂತೆ ಸುವಾಸನೆ ಬರಿಸಲು ಬಳಸುವ) ಲ್ಯಾವಿಂಡರ್‍ ಸಸ್ಯದ ಒಣಗಿಸಿದ ಹೂವುಗಳು ಮತ್ತು ಕಾಂಡಗಳು ಯಾ ಕಡ್ಡಿಗಳು.
  3. ನಸುಕೆನ್ನೀಲಿ ಬಣ್ಣ; ಸ್ವಲ್ಪ ಕೆಂಪು ಛಾಯೆಗೂಡಿದ ನಸುನೀಲಿಯ ಬಣ್ಣ.
ನುಡಿಗಟ್ಟು

lay up in lavender ಮುಂದಿನ ಉಪಯೋಗಕ್ಕಾಗಿ – ಎಚ್ಚರಿಕೆಯಿಂದ ತೆಗೆದಿಡು, ಜೋಪಾನ ಮಾಡು.

See also 1lavender
2lavender ಲ್ಯಾವಿಂಡರ್‍
ಸಕರ್ಮಕ ಕ್ರಿಯಾಪದ

(ಬಟ್ಟೆಗಳ ಮಧ್ಯೆ) ಲ್ಯಾವಿಂಡರ್‍ ಹೂಗಳನ್ನು, ಕಡ್ಡಿಗಳನ್ನು ಇಡು.