latitude ಲ್ಯಾಟಿಟ್ಯೂಡ್‍
ನಾಮವಾಚಕ
  1. (ಭೂಗೋಳಶಾಸ್ತ್ರ) ಅಕ್ಷಾಂಶ; ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಯಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂದುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೃತ್ತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್‍ಗಳಲ್ಲಿ ನಿರೂಪಿಸಲಾಗುವ, ಕೋನ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಉಷಾಂಶಕ್ಕೆ ಸಂಬಂಧಿಸಿದಂತೆ) ಪ್ರದೇಶಗಳು: warm latitudes ಬೆಚ್ಚನೆಯ ಪ್ರದೇಶಗಳು.
  3. (ಪ್ರಾಚೀನ ಪ್ರಯೋಗ) ಹರವು; ವ್ಯಾಪ್ತಿ; ವೈಶಾಲ್ಯ; ಪೂರ್ಣವಿಸ್ತಾರ: understood in its proper latitude ಅದನ್ನು ಉಚಿತ ವ್ಯಾಪ್ತಿಯಲ್ಲಿ ಅರಿತರೆ; ಅದರ ಇತಿಮಿತಿ ತಿಳಿದು ಅದನ್ನು ಅರಿತರೆ.
  4. (ಅರ್ಥ ವಿವರಣೆ, ವ್ಯಾಖ್ಯಾನ, ಕ್ರಿಯೆ ಯಾ ಅಭಿಪ್ರಾಯಗಳಲ್ಲಿ):
    1. ಔದಾರ್ಯ; ಮನೋವೈಶಾಲ್ಯ; ಉದಾರ – ಭಾವ, ವರ್ತನೆ; ಸಂಕುಚಿತ ಭಾವ, ಮನೋವೃತ್ತಿ ಇಲ್ಲದಿರುವುದು: was allowed much latitude ಬಹಳ ಔದಾರ್ಯ ತೋರಿಸಲಾಗಿತ್ತು.
    2. ಸ್ವಾತಂತ್ರ್ಯ; ಮುಕ್ತ ಅವಕಾಶ; ನಿಯಂತ್ರಣ ಇಲ್ಲದಿರುವಿಕೆ.: they allow their children too much latitude ಅವರು ತಮ್ಮ ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ಕೊಟ್ಟಿದ್ದಾರೆ.
    3. ಸಹನೆ; ಸಹಿಷ್ಣುತೆ; ಆಚಾರ, ವಿಚಾರ ಭೇದಗಳನ್ನು ಸಹಿಸಿಕೊಳ್ಳುವುದು, ಅವುಗಳಿಗೆ ಮುಕ್ತ ಅವಕಾಶಕೊಡುವುದು.
  5. (ಖಗೋಳ ವಿಜ್ಞಾನ) ಖಾಗೋಳಿಕ ಅಕ್ಷಾಂಶ; (ಯಾವುದೇ ಖಾಗೋಳಿಕ ಬಿಂದುವಿಗೆ ಸಂಬಂಧಿಸಿದಂತೆ) ಆ ಬಿಂದುವನ್ನೂ ಕ್ರಾಂತಿವೃತ್ತದ ಕೇಂದ್ರವನ್ನೂ ಸೇರಿಸುವ ಗೆರೆಗೂ ಕಾಂತಿವೃತ್ತಕ್ಕೂ ಇರುವ ಕೋನ.
  6. (ಹಾಸ್ಯ ಪ್ರಯೋಗ) ಅಗಲ: hat with great latitude of brim ತುಂಬ ಅಗಲದ ಅಂಚಿನ ಹ್ಯಾಟು.
ಪದಗುಚ್ಛ
  1. high latitudes ಹೆಚ್ಚಿನ ಅಕ್ಷಾಂಶದ ಪ್ರದೇಶಗಳು; ಉತ್ತರ ಮತ್ತು ದಕ್ಷಿಣ ಧ್ರುವಗಳ ಹತ್ತಿರದ ಪ್ರದೇಶಗಳು.
  2. low latitudes ಕಡಿಮೆ ಅಕ್ಷಾಂಶದ ಪ್ರದೇಶಗಳು; ವಿಷುವದ್ವೃತ್ತದ ಸಮೀಪದ ಪ್ರದೇಶಗಳು.