See also 2lateral
1lateral ಲ್ಯಾಟರ್‍(ರ)ಲ್‍
ಗುಣವಾಚಕ
  1. ಪಕ್ಕದ; ಪಾರ್ಶ್ವಸ್ಥ; ಪಾರ್ಶ್ವದ; ಪಕ್ಕಕ್ಕಿರುವ; ಪಕ್ಕದಲ್ಲಿ ಯಾ ಪಕ್ಕದ ಕಡೆ ಇರುವ.
  2. ಪಾರ್ಶ್ವದ; (ವಂಶದ) ಅಡ್ಡ – ಶಾಖೆಯ, ಕವಲಿನ; ಪಾರ್ಶ್ವ ಶಾಖೆಯ; ಮಗ್ಗುಲು ಪೀಳಿಗೆಯ; ಕುಟುಂಬದ ಪೀಳಿಗೆಯ ಮೂಲಪುರುಷನ ಸೋದರನ ಯಾ ಸೋದರಿಯ ಸಂತಾನದ.
  3. (ಧ್ವನಿವಿಜ್ಞಾನ) ಪಾರ್ಶ್ವಿಕ; ನಾಲಗೆಯ ಒಂದು ಅಥವಾ ಎರಡೂ ಪಕ್ಕಗಳ ಮೂಲಕ ಉಸಿರು ಹೊರಬರುವಾಗ ಹುಟ್ಟುವ.
ಪದಗುಚ್ಛ

lateral branch (of family). (ವಂಶದ) ಅಡ್ಡ – ಕವಲು, ಶಾಖೆ; ಪಾರ್ಶ್ವಶಾಖೆ.

See also 1lateral
2lateral ಲ್ಯಾಟರ್‍(ರ)ಲ್‍
ನಾಮವಾಚಕ
  1. ಪಕ್ಕ; ಪಕ್ಕದ್ದು; ಪಕ್ಕದ ಭಾಗ; ಪಾರ್ಶ್ವ; ಪಾರ್ಶ್ವಭಾಗ.
  2. ಪಕ್ಕದ ವಸ್ತು; ಪಕ್ಕದಲ್ಲಿರುವ ವಸ್ತು; (ಮುಖ್ಯವಾಗಿ) ಪಕ್ಕದ ಕೊಂಬೆ ಯಾ ಪಾರ್ಶ್ವಶಾಖೆ.
  3. (ಧ್ವನಿವಿಜ್ಞಾನ) ಪಾರ್ಶ್ವಿಕ ಧ್ವನಿ, ವರ್ಣ, ಉದಾಹರಣೆಗೆ ಲ, ಳ.