larva ಲಾರ್ವ
ನಾಮವಾಚಕ
(ಬಹುವಚನ larvae ಉಚ್ಚಾರಣೆ ಲಾರ್ವೀ).

ಲಾರ್ವ:

  1. ಮರಿಹುಳು; ಮೊಟ್ಟೆಯಿಂದ ಹೊರಬಂದ ಬಳಿಕ ಗೂಡುಕಟ್ಟುವವರೆಗಿನ ಕೀಟದ ರೂಪ, ಉದಾಹರಣೆಗೆ ಕಂಬಳಿಹುಳು (caterpillar).
  2. ತಾಯಿಯ ಗರ್ಭದಿಂದ ಯಾ ಮೊಟ್ಟೆಯಿಂದ ಹೊರಬಂದಾಗ, ಸಂಪೂರ್ಣ ಬೆಳೆದ ಸ್ಥಿತಿಗಿಂತ ಭಿನ್ನವಾಗಿದ್ದು, ಇನ್ನೂ ರೂಪಾಂತರ ಹೊಂದಲಿರುವ ಯಾ ರೂಪಾಂತರ ಹೊಂದುವುದಕ್ಕೆ ಮುಂಚಿನ ಅಪೂರ್ಣ ರೂಪ, ಉದಾಹರಣೆಗೆ ಕಪ್ಪೆಯ ಗೊದಮೊಟ್ಟೆ ಮರಿ, ಬಾಲದ ಮರಿ.